ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶ್ವಕಪ್ ವರ್ಷದಲ್ಲಿ ಸಕ್ರಿಯ ಮೋಡ್’ನಲ್ಲಿದೆ. ಇನ್ನು ಈ ವರ್ಷದ ಕೊನೆಯಲ್ಲಿ ನಡೆಯಲಿರುವ 50 ಓವರ್ಗಳ ಪಂದ್ಯಾವಳಿಯ ಯೋಜನೆಯನ್ನ ಈಗಾಗಲೇ ಪ್ರಾರಂಭಿಸಿದೆ. ಜನವರಿ 1ರ ಪರಿಶೀಲನಾ ಸಭೆಯು ಮುಂದಿನ ಹಾದಿಗೆ ಅಡಿಪಾಯ ಹಾಕಿದ್ದು, ಮುಖ್ಯ ತರಬೇತುದಾರನ ಕಡೆಗೆ ಗಮನ ತಿರುಗುವ ಸಾಧ್ಯತೆಯಿದೆ.
ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದವು 2023ರ ವಿಶ್ವಕಪ್ ವರೆಗೆ ಇದ್ದು, ಅವರು ವಿಸ್ತರಣೆಯನ್ನು ಪರಿಗಣಿಸದಿದ್ದರೆ, ಟೀಂ ಇಂಡಿಯಾ ಮುಂದಿನ ಮುಖ್ಯ ತರಬೇತುದಾರರಾಗಿ ಭಾರತೀಯ ಕ್ರಿಕೆಟ್ ಮಂಡಳಿಯು ಎನ್ಸಿಎಯ ಕ್ರಿಕೆಟ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನ ಆಯ್ಕೆ ಮಾಡಲಿದೆ ಎಂದು ವಿಶ್ವಾಸಾರ್ಹ ಮೂಲಗಳು ವರದಿ ಮಾಡಿವೆ.