ಬೆಂಗಳೂರು: ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ, ರಾಜ್ಯಾಧ್ಯಂತ ಡಿಸೆಂಬರ್ 30ರವರೆಗೆ ಐದು ದಿನ ಮಳೆಯಾಗುವ ಸಂಭವವಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿದ್ದು, ವಾಯುಭಾರ ಕುಸಿತದ ಪರಿಣಾಮ, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಡಿಸೆಂಬರ್ 30ರವರೆಗೆ ಮೋಡಕವಿದ ವಾತಾವರಣ ಹಾಗೂ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.
ಇನ್ನೂ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ. ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಡಿಸೆಂಬರ್ 30ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಂಡ್ಯ, ರಾಮನಗರದಲ್ಲಿ ಡಿಸೆಂಬರ್ 27ರವರೆಗೆ ಮಳೆಯಾಗುವ ಸಂಭವವಿದೆ. ತುಮಕೂರಿನಲ್ಲಿ ಡಿ.26ರವರೆಗೆ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಶೂನ್ಯ ಡಿಗ್ರಿಯತ್ತ ಸಾಗಿದ ಉತ್ತರ ಭಾರತ ತಾಪಮಾನ: ಚಳಿಯಿಂದ ಜನತೆ ಗಡಗಡ | Winter Session