ಶಿವಮೊಗ್ಗ: ಮಕ್ಕಳಿಗೆ ( Children ) ಸಂಬಂಧಿಸಿದಂತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ( Social Medea ) ಹಂಚೋ ಮುನ್ನಾ ಎಚ್ಚರಿಕೆ ವಹಿಸಬೇಕು. ಇಲ್ಲ ಅಂದರೇ ಏನು ಆಗಲಿದೆ ಎನ್ನುವ ಬಗ್ಗೆ, ಈ ಘಟನೆಯೇ ಸಾಕ್ಷಿ. ಅಂತದ್ದು ಏನು ಅಂದು ಮುಂದೆ ಸುದ್ದಿ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಓಂಕಾರ ತಾಳಗುಪ್ಪ, ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಗೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ, ಅಲ್ಲಿನ ಮುಖ್ಯೋಪಾಧ್ಯಾಯ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿ ಬಿಟ್ಟಿದ್ದರು.
ಆದ್ರೇ ಕಾಗೆಹಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ನಮ್ಮ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವಂತ ಸುದ್ದಿ ಸುಳ್ಳು. ಇಂತಹ ಸುದ್ದಿ ಹಬ್ಬಿದಂತ ಓಂಕಾರ ತಾಳಗುಪ್ಪ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಈ ಬಳಿಕ, ಇಂದು ಮಕ್ಕಳ ಪೋಷಕರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ, ನಮ್ಮ ಪುಟ್ಟ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಓಂಕಾರ ತಾಳಗುಪ್ಪ ಹಬ್ಬಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಮಕ್ಕಳ ಪೋಷಕರ ದೂರಿನ ಆಧಾರದ ಮೇಲೆ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಓಂಕಾರ ತಾಳಗುಪ್ಪ ವಿರುದ್ಧ ಪೋಸ್ಕೋ ಕಾಯಿದೆ ಸೆಕ್ಷನ್ 22ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
BIGG NEWS : ನಾಳೆ ‘ವಿಧಾನಪರಿಷತ್ ಉಪಸಭಾಪತಿ’ ಚುನಾವಣೆ : ಬಿಜೆಪಿ ಸದಸ್ಯರಿಗೆ ವಿಪ್ ಜಾರಿ
ಈ ಹಿನ್ನಲೆಯಲ್ಲಿ ನೀವು ಮಕ್ಕಳಿಗೆ ಸಂಬಂಧಿಸಿದಂತ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡೋ ಮುನ್ನ ಎಚ್ಚರವಹಿಸಿ. ಯಾಕೆಂದರೇ ಯಾವುದೇ ಮಗುವಿನ ಬಗ್ಗೆ ಲೈಂಗಿಕ ಸಂಬಂಧ ಸುಳ್ಳು ಸುದ್ದಿಯನ್ನು ಹಾಕಿದರೆ ಮತ್ತು ಮಗುವಿನ ಹೆಸರನ್ನು ಬಹಿರಂಗ ಪಡಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗಿದೆ. ಈ ಸಂಬಂಧ ಪೋಸ್ಕೋ ಕಾಯಿದೆ ಸೆಕ್ಸನ್ 22 ರ ಅಡಿಯಲ್ಲಿ ಆರು ತಿಂಗಳಿಂದ ಒಂದು ವರ್ಷದವರೆಗೆ ಶಿಕ್ಷೆಯಾಗಬಹುದು. ಸೋ ಎಚ್ಚರವಿರಲಿ.
ವರದಿ: ಉಮೇಶ್ ಮೊಗವೀರ, ಸಾಗರ