ಮಂಡ್ಯ: ಜಿಲ್ಲೆಯ ಮದ್ದೂರು ಎಲಿವೇಟೆಡ್ ರಸ್ತೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ( Farmer Chief Minister SM Krishna ) ಅವರ ಕಾರು ಕೆಟ್ಟು ನಿಂತಿದ್ದು, ಈ ಬಳಿಕ ಅವರು ಮತ್ತೊಂದು ಕಾರಿನಲ್ಲಿ ಮದ್ದೂರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕಾರು ಕೈಕೊಟ್ಟ ಪ್ರಸಂಗ ಮದ್ದೂರು ಪಟ್ಟಣದಲ್ಲಿ ಭಾನುವಾರ ಜರುಗಿತು. ಅವರ ಕಾರು ಪಂಚರ್ ಆಗಿತ್ತು ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಅವರು ಮತ್ತೊಂದು ಕಾರಿನಲ್ಲಿ ತೆರಳಿದ್ದಾರೆ ತಿಳಿದು ಬಂದಿದೆ.
ಕಣ್ಣೀರು, ಟಿಪ್ಪು ತಾತನ ನೆನಪೆಂದರೆ ಚುನಾವಣೆ ಕಾಲ ಬಂದಿದೆ ಎಂದರ್ಥ – ಬಿ.ಎಲ್.ಸಂತೋಷ್
ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಎಸ್.ಎಂ.ಕೃಷ್ಣ ಅವರು ಮಂಡ್ಯದ ಕರ್ನಾಟಕ ಸಂಘ ಮತ್ತು ಸಂಕಥನ ಸಂಘ ಇವರ ಸಹಯೋಗದಲ್ಲಿ ಜಗದೀಶ್ ಕೊಪ್ಪ ಅವರ ದಕ್ಷಿಣದ ಗಾಂಧಿ ಕೆ.ಕಾಮರಾಜ್ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು.
ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ಅವರೊಂದಿಗೆ ತಮ್ಮ ರೇಂಜ್ ರೋವರ್ ಕಾರಿನಲ್ಲಿ ತೆರಳುತ್ತಿದ್ದಾಗ ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ಹೆದ್ದಾರಿಯ ಮೇಲು ಸೇತುವೆ ( ಎಲಿವೇಟೆಡ್ ) ಮೇಲೆ ಕಾರು ಪಂಚರ್ ಆದ ಕಾರಣ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ. ಆನಂತರ ಅವರ ಕಾರನ್ನು ಸ್ಥಳದಲ್ಲೇ ಬಿಟ್ಟು, ಚಾಲಕನಿಗೆ ದುರಸ್ಥಿ ಮಾಡಿಕೊಂಡು ಮಂಡ್ಯಗೆ ಬರುವಂತೆ ಸೂಚನೆ ನೀಡಿದ ನಂತರ ಮಾಜಿ ಮುಖ್ಯಮಂತ್ರಿ ಕೃಷ್ಣ ಅವರು ತಮ್ಮ ಕಾರಿನ ಹಿಂದೆ ಬರುತ್ತಿದ್ದ ಬಿ.ಎಲ್.ಶಂಕರ್ ಅವರ ಇನ್ನೋವಾ ಕಾರನ್ನೇರಿ ಮಂಡ್ಯಗೆ ಪ್ರಯಾಣ ಬೆಳೆಸಿದರು.
‘ಕಾಂಗ್ರೆಸ್ ಪಕ್ಷ’ ಪ್ರತಿ ಹಂತದಲ್ಲೂ ಭಯೋತ್ಪಾದನೆಯನ್ನು ವಿರೋಧ ಮಾಡಿದೆ – ಡಿಕೆಶಿ
ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ನಾಗೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಕುಮಾರ್, ಮುಖಂಡರಾದ ಅಪೂರ್ವ ಚಂದ್ರು, ವಿ.ಎಸ್.ನಾಗರಾಜು, ಬೋಮ್ಮೆಗೌಡ, ವಳಗೆರೆಹಳ್ಳಿ ಸುನೀಲ್ ಕುಮಾರ್, ವಕೀಲ ಶಿವರಾಂ, ಗೊರವನಹಳ್ಳಿ ಕೃಷ್ಣೇಗೌಡ, ಅವಸರದಳ್ಳಿ ನಾಗರಾಜ್ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ