ನವದೆಹಲಿ : ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ಅತಿಕ್ರಮಣ ಮತ್ತು ಭಾರತೀಯ ಸೇನೆಯೊಂದಿಗಿನ ಚಕಮಕಿ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದೀಗ ಅವರ ಈ ಹೇಳಿಕೆಗೆ ಹಲವು ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವರ ಆಕ್ರೋಶ ಭುಗಿಲೆದ್ದಿದೆ. ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಎಂದು ರಾಹುಲ್ ಶುಕ್ರವಾರ ಆರೋಪಿಸಿದ್ದರು. ಭಾರತ ಸರ್ಕಾರವು ನಿದ್ರಿಸುತ್ತಿದ್ದು, ಅಪಾಯವನ್ನ ನಿರ್ಲಕ್ಷಿಸುತ್ತಿದೆ ಎಂದಿದ್ದರು. ಇದೀಗ ಕಾಂಗ್ರೆಸ್ ನಾಯಕರ ಈ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.
ಅನುರಾಗ್ ಠಾಕೂರ್ ಅವರು, ‘ರಾಹುಲ್ ಗಾಂಧಿ ಅವರ ಹೇಳಿಕೆಯಿಂದ ನನಗೆ ಆಶ್ಚರ್ಯವಿಲ್ಲ, ಏಕೆಂದರೆ ಡೋಕ್ಲಾಮ್ ಘಟನೆ ನಡೆದಾಗ ಮತ್ತು ಸರ್ಜಿಕಲ್ ಸ್ಟ್ರೈಕ್ ಮಾಡಿದಾಗಲೂ ರಾಹುಲ್ ಗಾಂಧಿ ಇಂತಹ ಪ್ರಶ್ನೆಗಳನ್ನು ಎತ್ತಿದ್ದರು. ಬಹುಶಃ ರಾಹುಲ್ ಗಾಂಧಿಗೆ ನಮ್ಮ ಸೇನೆಯ ಮೇಲೆ ನಂಬಿಕೆ ಇಲ್ಲ. ಅವರು, ‘ಇದು 1962ರ ಭಾರತವಲ್ಲ. ಇದು 2014 ರ ಭಾರತ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಮುನ್ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ 10 ವರ್ಷಗಳಿಂದ ನಮ್ಮ ಸೇನೆಗೆ ಫೈಟರ್ ಜೆಟ್, ಬುಲೆಟ್ ಪ್ರೂಫ್ ಜಾಕೆಟ್ ಮತ್ತು ಸ್ನೋ ಬೂಟುಗಳನ್ನ ಖರೀದಿಸಲು ಸಾಧ್ಯವಾಗಲಿಲ್ಲ. ನಮ್ಮ ಸೇನೆಗಾಗಿ ನೀವು (ಕಾಂಗ್ರೆಸ್) ಏನು ಮಾಡಿದ್ದೀರಿ?’ ಎಂದು ಪ್ರಶ್ನಿಸಿದರು.
ಇನ್ನು ಕೇಂದ್ರ ಸಚಿವರು, ‘ಇಂದು ಭಾರತದಲ್ಲಿ 300ಕ್ಕೂ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನ ತಯಾರಿಸಲಾಗುತ್ತಿದೆ. ಭಾರತ ಈಗ ರಕ್ಷಣಾ ಸಾಧನಗಳನ್ನ ರಫ್ತು ಮಾಡುತ್ತದೆ, ಆಮದು ಅಲ್ಲ. ಇದು ಸ್ವಾವಲಂಬಿ ಭಾರತ. ಡೋಕ್ಲಾಂ ಘಟನೆಯ ಸಂದರ್ಭದಲ್ಲೂ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ಸೇನೆಯನ್ನ ಭೇಟಿ ಮಾಡಿದ್ದರು ಎಂದು ಹೇಳಿದರು.
ಇನ್ನು ಶುಕ್ರವಾರ ರಾಹುಲ್ ಗಾಂಧಿ, ‘ಚೀನಾ ವಿಷಯದಲ್ಲಿ ಸರ್ಕಾರ ವಿಷಯಗಳನ್ನ ಮರೆಮಾಚಲು ಪ್ರಯತ್ನಿಸುತ್ತಿದೆ. ಆದರೆ ಅದನ್ನು ಮರೆಮಾಡಲು ಸಾಧ್ಯವಿಲ್ಲ. ಚೀನಾ ಯುದ್ಧಕ್ಕೆ ತಯಾರಿ ನಡೆಸ್ತಿದೆ . ಆದ್ರೆ, ಸರಕಾರ ಇದನ್ನ ನಿರ್ಲಕ್ಷಿಸ್ತಿದೆ. ನಮ್ಮ ವಿದೇಶಾಂಗ ಸಚಿವರು ತಮ್ಮ ತಿಳುವಳಿಕೆಯನ್ನ ಆಳಗೊಳಿಸಬೇಕು ಎಂದಿದ್ದರು.
Mouth Ulcers: ʻಬಾಯಿ ಹುಣ್ಣುʼವಿನಿಂದ ಬಳಲುತ್ತಿದ್ರೆ ಈ ಮನೆ ಮದ್ದುಗಳನ್ನು ಟ್ರೈ ಮಾಡಿ, ನೋವಿನಿಂದ ಮುಕ್ತಿ ಸಿಗಲಿದೆ!