ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಕಾನೂನು, ಸಂಚಾರ ನಿರ್ವಹಣೆಗೆ ಮಹತ್ವದ ಕ್ರಮವನ್ನು 9 ಪೊಲೀಸ್ ಉಪ-ವಿಭಾಗ ( Karnataka Police ), ನಾಲ್ಕು ಸಂಚಾರಿ ಠಾಣೆಗಳನ್ನು ( Traffic Police Station ) ಹೊಸದಾಗಿ ತೆರೆಯಲು ಅನುಮತಿ ನೀಡಿ, ಆದೇಶಿಸಿದೆ.
ಈ ಕುರಿತಂತೆ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಭ್ರಷ್ಟಾಚಾರ ನಿಗ್ರಹ ದಳದಿಂದ ಪೊಲೀಸ್ ಇಲಾಖೆಗೆ ಹಂಚಿಕೆ ಮಾಡಿರುವ ಒಟ್ಟು 221 ಹುದ್ದೆಗಳಲ್ಲಿ ಈ ಕೆಳಕಂಡಂತೆ ಮರು ಹಂಚಿಕೆ ಮಾಡಿಕೊಳ್ಳಲು ಸಹಮತಿ ನೀಡಿಲಾಗಿದೆ ಎಂದಿದ್ದಾರೆ.
Job Alert: ಡಿ.21ರಂದು ಜಿಲ್ಲಾ ಕಾರ್ಯಕ್ರಮ ಸಂಯೋಜಕರ ನೇಮಕಾತಿ ನೇರ ಸಂದರ್ಶನ
ಪೊಲೀಸ್ ಉಪಾಧೀಕ್ಷಕರ (ಸಿವಿಲ್)-17 ಹುದ್ದೆಗಳಲ್ಲಿ 8 ಹುದ್ದೆಗಳನ್ನು ವಿವಿಧ ಘಟಕಗಳಿಗೆ ಹಾಗೂ ಹೊಸದಾಗಿ ತೆರೆಯಲಾಗುವ 9 ಪೊಲೀಸ್ ಉಪ ವಿಭಾಗಗಳಿಗೆ ಮರು ಹಂಚಿಕೆ ಮಾಡಲು ಸಹಮತಿಸಿದೆ ಎಂದಿದ್ದಾರೆ.
ಹೊಸದಾಗಿ 9 ಪೊಲೀಸ್ ಉಪ-ವಿಭಾಗ ಓಪನ್
- ವಿಜಯನಗರ ಸಂಚಾರ ಉಪ-ವಿಭಾಗ, ಬೆಂಗಳೂರು ನಗರ
- ಹೆಚ್ ಎಸ್ ಆರ್ ಲೇಔಟ್ ಸಂಚಾರ ಉಪ ವಿಭಾಗ, ಬೆಂಗಳೂರು
- ಪೀಣ್ಯ ಉಪ ವಿಭಾಗ, ಬೆಂಗಳೂರು ನಗರ
- ಕೆಂಗೇರಿ ಉಪ-ವಿಭಾಗ, ಬೆಂಗಳೂರು ನಗರ
- ವಿಜಯನಗರ ಉಪ-ವಿಭಾಗ, ಮೈಸೂರು ನಗರ
- ಶಿವಮೊಗ್ಗ ಉಪ ವಿಭಾಗ-2, ಶಿವಮೊಗ್ಗ ಜಿಲ್ಲೆ
- ಚನ್ನರಾಯಪಟ್ಟಣ ಉಪ ವಿಭಾಗ, ಹಾಸನ ಜಿಲ್ಲೆ
- ವಿಜಯಪುರ ಗ್ರಾಮಾಂತರ ಉಪ ವಿಭಾಗ, ವಿಜಯಪುರ ಜಿಲ್ಲೆ
- ಬೆಳ್ತಂಗಡಿ ಉಪ ವಿಭಾಗ, ದಕ್ಷಿಣ ಕನ್ನಡ ಜಿಲ್ಲೆ
ಇನ್ನೂ ಬೆಂಗಳೂರು ನಗರ ಸುಗಮ ಸಂಚಾರ ನಿರ್ವಣೆಗಾಗಿ ಹೊಸದಾಗಿ ನಾಲ್ಕು ಸಂಚಾರ ಪೊಲೀಸ್ ಠಆಣೆಗಳನ್ನು ತೆರೆಯಲಾಗುತ್ತಿದೆ. ಅದಕ್ಕಾಗಿ ಎಸಿಬಿಯಿಂದ ಮಿಕ್ಕುಳಿದಂತ ಹುದ್ದೆಗಳನ್ನು ಮರುಹಂಚಿಕೆ ಮಾಡಲಾಗಿದೆ.
ಬೆಂಗಳೂರಿನ ಹೊಸ ಸಂಚಾರಿ ಪೊಲೀಸ್ ಠಾಣೆಗಳು
- ತಲಘಟ್ಟಪುರ
- ಬೆಳ್ಳಂದೂರು
- ಹೆಣ್ಣೂರು
- ಮಹದೇವಪುರ
ಹೀಗೆ ಒಟ್ಟಾರೆಯಾಗಿ ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಬೆಂಗಳೂರಿನ ಸಂಚಾರ ನಿರ್ವಹಣೆಯ ಭಾಗವಾಗಿ 9 ಉಪ -ವಿಭಾಗೀಯ ಪೊಲೀಸ್ ಠಾಣೆ, ಸಂಚಾರ ಠಾಣೆಯನ್ನು ತೆರೆಯಲಾಗುತ್ತಿದೆ.
ವರದಿ: ವಸಂತ ಬಿ ಈಶ್ವರಗೆರೆ