ಬೆಂಗಳೂರು: ನಾವು ನಡೆಸಿದಂತ ಸರ್ವೇಯಲ್ಲಿ ಕ್ಲಿಯರ್ ಆಗಿದೆ. ನಾವು 136 ಸೀಟ್ ಗೆಲ್ಲುತ್ತೇವೆ. ಬಿಜೆಪಿ ಕೇವಲ 60 ರಿಂದ 65 ಸ್ಥಾನವನ್ನು ಗೆಲ್ಲಲಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವು ಮುಂಬರುವಂತ ಚುನಾವಣೆಯಲ್ಲಿ 136 ಸ್ಥಾನ ಗೆಲ್ಲಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 60 ರಿಂದ 65 ಸ್ಥಾನ ಗೆಲ್ಲಲಿದೆ. ಐದು ಬಾರಿ ಸೋತ ಕ್ಷೇತ್ರಗಳಲ್ಲಿಯೂ ನಮಗೆ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election 2023 ) ಗೆಲುವು ಸಿಗಲಿದೆ ಎಂದರು.
WATCH VIDEO: 50 ವರ್ಷದ ತಾಯಿಗೆ ಮರುಮದುವೆ ಮಾಡಿಸಿದ ಮಗಳು… ಹೃದಯಸ್ಪರ್ಶಿ ವಿಡಿಯೋ ವೈರಲ್
ಸಚಿವ ಅಶೋಕ್ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಎನ್ನುತ್ತಿದ್ದಾರೆ. ಆದ್ರೇ ಬಿಜೆಪಿಗೆ ಸೇರಿಸಿಕೊಳ್ಳಲು ಇನ್ನೂ ಯಾಕೆ ಕಾಯುತ್ತಿದ್ದೀರಿ? ಸಂಕ್ರಾಂತ್ರಿ ಅವರಿಗೂ ಇದೆ, ನಮಗೂ ಇದೆ ಎಂಬುದಾಗಿ ಆರ್ ಅಶೋಕ್ ಗೆ ಟಾಂಗ್ ನೀಡಿದರು.
ಅಂದಹಾಗೇ ಮುಂಬರುವಂತ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಸೀಟು ಗೆಲ್ಲಲಿದೆ ಎನ್ನುವ ಬಗ್ಗೆ ಪಕ್ಷದಿಂದ ಗೌಪ್ಯವಾಗಿ ಸರ್ವೇ ನಡೆಸಿತ್ತು ಎನ್ನಲಾಗುತ್ತಿದೆ. ಈ ಸರ್ವೇಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಬಹುಮತ ಪಡೆದು, ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅದು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಿದೆ.
ನಾನು ರೌಡಿ’ಕೊತ್ವಾಲ್’ ಶಿಷ್ಯ ಎನ್ನುವುದಕ್ಕೆ ದಾಖಲೆ ಏನಿದೆ..? : ಬಿಜೆಪಿಗೆ ಡಿಕೆಶಿ ತಿರುಗೇಟು