ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದೆ. ಆದ್ರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ನಗರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
BIGG NEWS : ‘ಬಿಜೆಪಿಯವರು ಮುಸಲ್ಮಾನರ ಮತಗಳಿಗೆ ಎಲ್ಲಿ ಕೈ ಹಾಕ್ತಾರೋ ಅನ್ನೋ ಭಯ’ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಹೌದು ಮಹಿಳೆಗೆ ಜ್ವರ ಎಂದು ವೈದ್ಯರ ಬಳಿ ಹೋದವರ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯ ಇಂಜೆಕ್ಷನ್, ಮಾತ್ರೆ ಕೊಟ್ಟು ಮಹಿಳೆಯನ್ನ ಶೋಚನಿಯ ಸ್ಥಿತಿಗೆ ತಂದೊಡ್ಡಿದ್ದಾನೆ.ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿರೋ ಜ್ಯೋತಿಗೆ ಜ್ವರ ಇದ್ದ ಕಾರಣ ಹೆಗ್ಗನಹಳ್ಳಿ ಸಂಜೀವಿನಿ ನಗರದಲ್ಲಿದ್ದ ಸಹನಾ ಪಾಲಿಕ್ಲಿನಿಕ್ಗೆ ಹೋಗಿದ್ದಾರೆ. ಕ್ಲಿನಿಕ್ ನಲ್ಲಿದ್ದ ನಕಲಿ ಡಾಕ್ಟರ್ ನಾಗರಾಜ್ ಶವಣೂರ್ಗೆ ತೋರಿಸಿದ್ದಾರೆ. ಮಹಿಳೆಯ ಸೊಂಟದ ಭಾಗಕ್ಕೆ ಒಂದೇ ಜಾಗದಲ್ಲಿ ಎರಡು ಇಂಜೆಕ್ಷನ್ ಚುಚ್ಚಿ ಮಾತ್ರೆ ಬರೆದು ಕಳಿಸಿಕೊಟ್ಟಿದ್ದಾನೆ.
ದಿನ ಕಳೆದಂತೆ ಇಂಜೆಕ್ಷನ್ ಕೊಟ್ಟ ಜಾಗ ಸಂಪೂರ್ಣ ಕಪ್ಪಾಗಲು ಶುರುವಾಗಿದೆ. ಮತ್ತೆ ಕ್ಲಿನಿಕ್ಗೆ ಹೋಗಿ ಜ್ಯೋತಿ ನಾಗರಾಜ್ಗೆ ತೋರಿಸಿದ್ದಾರೆ. ಆಗಲೂ ಆಯಿಟ್ಮೆಂಟ್ ಕೊಟ್ಟು ಕಳಿಸಿದ್ದಾರೆ.