ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ( Government First Grade College ) ಖಾಲಿ ಇರುವಂತ ಪ್ರಾಂಶುಪಾಲರ ಹುದ್ದೆಗೆ ( Principal Recruitment ) ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ( Karnataka Examination Authority – KEA ) ಅಧಿಸೂಚನೆ ( Notification ) ಹೊರಡಿಸಲಾಗಿದೆ. ಸರ್ಕಾರಿ ಪ್ರಥಮದ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವಂತ 310 ಪ್ರಾಂಶುಪಾಲರ ಗ್ರೇಡ್-1 ಹುದ್ದೆಗಳಿಗೆ ( Principal’s Grade-I Post ) ನೇರ ನೇಮಕಾತಿ ( Direct Recruitment ) ಮೂಲಕ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಪತ್ರದ ಅಧಿಸೂಚನೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ( Competitive Exam ) ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಪರೀಕ್ಷಾ ಪ್ರಾಧಿಕರಾವನ್ನಾಗಿ ನಿಯೋಜಿಸಲಾಗಿರುತ್ತದೆ. ಹೀಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ( Online Application ) ಆಹ್ವಾನಿಸಲಾಗಿರುವುದಾಗಿ ತಿಳಿದೆ.
ಹುದ್ದೆಗಳ ವಿವರ
- ರಾಜ್ಯವ್ಯಾಪಿ ಮಿಕ್ಕುಳಿದ ವೃಂದ – 265
- ಕಲ್ಯಾಣ ಕರ್ನಾಟಕ ವೃಂದ -45
ಅರ್ಜಿ ಶುಲ್ಕ
- ಸಾಮಾನ್ಯ ಅಭ್ಯರ್ಥಿಗಳು, ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.5000
- ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದ್ರೇ ಪ್ರಕ್ರಿಯೆ ಶುಲ್ಕವಾಗಿ ರೂ.2,500 ಕಡ್ಡಾಯವಾಗಿ ಪಾವತಿಸಬೇಕಿದೆ.
ಪ್ರಮುಖ ದಿನಾಂಕಗಳು
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 16-12-2022ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-01-2023 ಆಗಿರುತ್ತದೆ. ಇ-ಪೋಸ್ಟ್ ಆಫೀಸ್ ನಲ್ಲಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ 17-01-2023 ಆಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಅಭ್ಯರ್ಥಿಗಳು ಕಡ್ಡಾಯವಾಗಿ https://kea.kar.nic.in ಜಾಲತಾಣದ ಮೂಲಕ ಆನ್ ಲೈನ್ ಮೂಲಕವೇ ಸಲ್ಲಿಸಬೇಕು. ಇದರ ಹೊರತಾಗಿ ಬೇರೆ ಯಾವುದೇ ವಿಧಾನದಲ್ಲಿ ಸಲ್ಲಿಸುವಂತಿಲ್ಲ.
ಆಯ್ಕೆ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 100 ಅಂಕಗಳಿಗೆ 2 ಗಂಟೆಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಗಳಿಸಿದಂತ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಇಎ ಅಧಿಕೃತ ವೆಬ್ ಸೈಟ್ https://kea.kar.nic.in ಗೆ ಭೇಟಿ ನೀಡಿ ಪರಿಶೀಲಿಸುವುದು
ವರದಿ: ವಸಂತ ಬಿ ಈಶ್ವರಗೆರೆ