ತುಮಕೂರು: ರಾಜ್ಯದಲ್ಲಿ ಬುಡಕಟ್ಟು ಸಂಸ್ಕೃಿತಿಯನ್ನು ಹೊಂದಿರುವಂತ ಸಮುದಾಯಗಳಲ್ಲಿ ಕಾಡುಗೊಲ್ಲ ಸಮುದಾಯವು ( Kadugolla Community ) ಒಂದಾಗಿದೆ. ಈ ಸಮುದಾಯಕ್ಕೆ ಎಂದೋ ಪರಿಶಿಷ್ಟ ಪಂಗಡಕ್ಕೆ ( Scheduled Tribe ) ಸೇರಬೇಕಿತ್ತು ಎಂದು ರಾಜನಹಳ್ಳಿ ವಾಲ್ಮೀಕಿ ಗುರು ಮಠದ ಸ್ವಾಮೀಜಿ ಹೇಳಿದ್ದಾರೆ.
BREAKING NEWS : ಮೂಡಿಗೆರೆಯಲ್ಲಿ ಭಾರೀ ಉಪಟಳ ಕೊಟ್ಟಿದ್ದ ಮತ್ತೊಂದು ‘ಪುಂಡಾನೆ’ ಸೆರೆ
ಇಂದು ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಜಿ.ಕೆ. ನಾಗಣ್ಣ ಅವರು ಕುಣಿಗಲ್ ನಲ್ಲಿ ಇರುವಂತ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಸ್ವಾಮಿಗಳನ್ನು ಭೇಟಿ ಮಾಡಿ, ಸ್ವಾಮೀಜಿಗೆ ಗೌರವ ಸಲ್ಲಿಸಿದರು. ಅಲ್ಲದೇ ಕಾಡುಗೊಲ್ಲ ಎಸ್.ಟಿ ಸೇರ್ಪಡೆ ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದೆ.
ಈ ಬಳಿಕ ಮಾತನಾಡಿದಂತ ರಾಜನಹಳ್ಳಿ ವಾಲ್ಮೀಕಿ ಗುರು ಪೀಛದ ಸ್ವಾಮೀಜಿ, ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಬೇಕೆಂಬುದಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದರು.
ಕಾಡುಗೊಲ್ಲ ಸಮುದಾಯವನ್ನು ಇದುವರೆಗೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗದಿರುವುದು ದುರದೃಷ್ಟ ಸಂಗತಿಯಾಗಿದೆ. ಕಾಡುಗೊಲ್ಲರು ಎಸ್.ಟಿ ಪಟ್ಟಿಗೆ ಸೇರಬೇಕು ಎಂಬುದು ನನ್ನ ಒತ್ತಾಸೆಯಾಗಿದೆ ಎಂದರು.