ಬೆಂಗಳೂರು: ನಾಳೆಯಿಂದ ಮೂರು ದಿನಗಳ ಬ್ರೇಕ್ ಬಳಿಕ, ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಗುಬ್ಬಿಯಲ್ಲಿ ನಿಂತಿದ್ದ ರಥಯಾತ್ರೆ, ನಾಳೆಯಿಂದ ಚಿಕ್ಕನಾಯಕನಹಳ್ಳಿಯಿಂದ ಪುನಾರಂಭಗೊಳ್ಳುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಆದ್ರೇ ಇದೀಗ ಸೈಕ್ಲೋನ್ ಕಾರಣದಿಂದಾಗಿ ನಾಲ್ಕು ದಿನ ಪಂಚರತ್ನ ರಥಯಾತ್ರೆಯನ್ನು ಮುಂದೂಡಿಕೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಅವರು, ಮಳೆಯ ಕಾರಣ, ಪಂಚರತ್ನ ರಥಯಾತ್ರೆಯನ್ನು 4 ದಿನ ರಥಯಾತ್ರೆ ಮುಂದೂಡಿಕೆ ಮಾಡಲಾಗುತ್ತದೆ. ಚಿಕ್ಕನಾಯಕನಹಳ್ಳಿಯಿಂದ ಮತ್ತೆ ಶುರುವಾಗಬೇಕಿದ್ದ ರಥಯಾತ್ರೆ, ನಾಲ್ಕು ದಿನ ಮುಂದೂಡಿಕೆ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಬೆಳಗಾವಿ ಗಡಿ ವಿಚಾರವಾಗಿ ಮಹಾಜನ್ ವರದಿಯೇ ಅಂತಿಮ – ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತುಮಕೂರು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆಯನ್ನು ಹವಾಮಾನ ಇಲಾಖೆ ಮಾಡಿದೆ. ಹೀಗಾಗಿ ನಾಲ್ಕು ದಿನ ಮುಂದೂಡಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನೂ ಪಂಚರತ್ನ ರಥಯಾತ್ರೆ ಮಾರ್ಗ, ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ. ಡಿಸೆಂಬರ್ 15ರಂದು ಮಾಗಡಿಯಲ್ಲಿ ರಥಯಾತ್ರೆ ನಡೆಯಲಿದೆ. ಡಿಸೆಂಬರ್ 27ರಂದು ಮತ್ತೆ ತುಮಕೂರು ಜಿಲ್ಲೆಗೆ ರಥಯಾತ್ರೆ. ಡಿಸೆಂಬರ್ 27ರಂದು ತುರುವೇಕೆರೆ, 28ರಂದು ಚಿಕ್ಕನಾಯಕನಹಳ್ಳಿ, 29ರಂದು ತುಮಕೂರು ಗ್ರಾಮಾಂತರ, 30ರಂದು ಕುಣಿಗಲ್ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ ಎಂದರು.
ಡಿಸೆಂಬರ್ 15ರಂದು ಮಾಗಡಿ, 16ರಂದು ರಾಮನಗರ, 17ರಂದು ಹಾರೋಹಳ್ಳಿ, 18ರಂದು ಕನಕಪುರ, 19ರಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ,
ಡಿಸೆಂಬರ್ 20ರಂದು ಮಂಡ್ಯ ಜಿಲ್ಲೆಗೆ ರಥಯಾತ್ರೆ, 20ರಂದು ಮಳವಳ್ಳಿ, 21ಕ್ಕೆ ಮದ್ದೂರು, 22ಕ್ಕೆ ಮಂಡ್ಯ, 23ಕ್ಕೆ ಶ್ರೀರಂಗಪಟ್ಟಣ, 24ಕ್ಕೆ ಪಾಂಡವಪುರ, 25ಕ್ಕೆ ಕೆ.ಆರ್.ಪೇಟೆ, 26ಕ್ಕೆ ನಾಗಮಂಗಲ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ತಿಳಿಸಿದರು.