ಬೆಂಗಳೂರು: ಚುನಾವಣಾ ಆಯೋಗವು ( Central Election Commission – CEC ) ಚುನಾವಣೆ ನಡೆಸುವ ಪ್ರಕ್ರಿಯೆಗೆ ಈಗಲೇ ಚಾಲನೆ ಕೊಟ್ಟಿರುವುದರಿಂದ ಇಂತದ್ದೊಂದು ಪ್ರಶ್ನೆ ಉದ್ಬವವಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳ ವರ್ಗಾವಣೆಗೆ ಕುರಿತು, ನೀತಿ ರೂಪಿಸಿರುವ ಚುನಾವಣಾ ಆಯೋಗವು, ರಾಜ್ಯ ಸರ್ಕಾರಕ್ಕೆ ( Karnataka Government ) ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಕಟ್ಟು ನಿಟ್ಟಿನ ಮಾನದಂಡಗಳನ್ನು ತಿಳಿಸಿದೆ.
ಇದರಂತೆ ಪೊಲೀಸರು ಸೇರಿದಂತೆ ನೇರವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸರ್ಕಾರಿ ಅಧಿಕಾರಿಗಳು ಮತ್ತು ಸಮಗ್ರ ಸಿಬ್ಬಂದಿಗಳು ತಮ್ಮ ತವರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವಂತೆ ಇಲ್ಲ. ಅಲ್ಲಿ ಚುನಾವಣಾ ಕಾರ್ಯಗಳಲ್ಲಿ, ಸಿದ್ಧತೆಗಳಲ್ಲಿ, ಪ್ರಕ್ರಿಯೆಗಳಲ್ಲಿ ಅವರು ಭಾಗವಹಿಸಬಾರದು. ಜೊತೆಗೆ ಒಂದೇ ಕಡೆ ಮೂರು ವರ್ಷ ವರ್ಷಕ್ಕಿಂತ ಹೆಚ್ಚು ಕಾರ್ಯನಿರ್ವಹಿಸಿದಂತವನ್ನು ವರ್ಗಾವಣೆಗೆ ಸೂಚಿಸಿದೆ. ಉಳಿದ ಯಾವುದೇ ಸಿಬ್ಬಂದಿಗಳಿಗೂ ಈ ವರ್ಗಾವಣೆ ಸೂತ್ರ ಅನ್ವಯವಾಗುವುದಿಲ್ಲ.
ರಾಜ್ಯ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ಇನ್ನೂ ಐದಾರು ತಿಂಗಳು ಬಾಕಿ ಇರುವಾಗಲೇ ಇಷ್ಟೊಂದು ಬೇಗ, ಈ ಸೂಚನೆ ಆಯೋಗದಿಂದ ಯಾಕೆ ಬಂತು ಎನ್ನುವುದೇ ಜಿಜ್ಞಾನೆಸೆಯಾಗಿದೆ. ಅಂದರೇ ನಿಗದಿತ ಅವಧಿಗಿಂತಲೂ ಮುನ್ನವೇ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಸುವ ಸೂಚನೆ ಇದು ಆಗಿದೆಯೇ ಎನ್ನುವ ಗುಮಾನಿಗೆ ಇದು ಎಡೆಮಾಡಿಕೊಟ್ಟಿದೆ.
ಗುಜರಾತ್ ಚುನಾವಣೆಯ ಫಲಿತಾಂಶ ( Gujarat Election Results ) ಹೊರ ಬಿದ್ದಿದ್ದು, ಬಿಜೆಪಿ ಪ್ರಚಂಡ ದಿಗ್ವಿಜಯ ಸಾಧಿಸಿದ್ದು, ಅದರ ಜೊತೆಗೆ ಆಯೋಗದಿಂದ ಈ ಸೂಚನೆ ಹೊರ ಬಿದ್ದಿರುವುದು ನೋಡಿದರೇ ಕುತೂಹಲಕ್ಕೆ ಕಾರಣವಾಗಿದೆ.
ಗುಜರಾತ್ ಚುನಾವಣೆಯ ಗೆಲುವಿನ ಅಲೆಯಲ್ಲೇ ಭರಾಟೆಯ ಬಿಸಿಯಲ್ಲೇ, ರಾಜ್ಯದಲ್ಲೂ ವಿಧಾನಸಭಾ ಚುನಾವಣೆ ( Assembly Election ) ನಡೆಸಿದರೇ ಇಲ್ಲೂ ಆ ಗೆಲುವಿನ ಅಲೆ ಮುಂದುವರೆದು, ಬಿಜೆಪಿ ಜಯಭೇರಿ ಬಾರಿಸಲಿದೆ ಎನ್ನುವುದು ಬಿಜೆಪಿಯ ರಾಷ್ಟ್ರೀಯ ನಾಯಕರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೇ ವಿವಾದಗಳು, ಹಗರಣಗಳು ಮುತ್ತಿಕೊಂಡಿರುವ ರಾಜ್ಯ ಬಿಜೆಪಿ ( BJP Karnataka ), ಅವಧಿಗೆ ಮುನ್ನಾ ಚುನಾವಣೆ ನಡೆದರೇ ಜನಮನ್ನಣೆಗೆ ಪಾತ್ರವಾಗಲಿದೆಯೇ.? ಬಿಜೆಪಿಗೆ ಸೆಣೆಸಾಟ ನಡೆಸುವ ಶಕ್ತಿ ಇದೆಯೇ? ವಿದ್ಯಮಾನಗಳನ್ನು ಕಾದು ನೋಡಬೇಕಿದೆ.
ಅಂದಹಾಗೇ ಹಾಲಿ ವಿಧಾನಸಭೆಯ ಕಾಲಾವಧಿ ಮೇ.24, 2023ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಚುನಾವಣಾ ಪ್ರಕ್ರಿಯೆಗಳಿಗೆ ಕೇಂದ್ರ ಚುನಾವಣಾ ಆಯೋಗವು ( Central Election Commission ) ಚುರುಕು ನೀಡಿದೆ. ಈ ಎಲ್ಲಾ ದೃಷ್ಠಿಯಲ್ಲಿ ಕರ್ನಾಟಕದಲ್ಲಿ ಅವಧಿಗೆ ಮುನ್ನವೇ ವಿಧಾನಸಭಾ ಚುನಾವಣೆ ನಡೆಯಲಿದೆಯಾ ಎನ್ನುವಂತ ಕುತೂಹಲವನ್ನು ಹುಟ್ಟು ಹಾಕಿದೆ.
ವಿಶೇಷ ವರದಿ: ಸಮೀವುಲ್ಲಾ ಬೆಲಗೂರು, ಹಿರಿಯ ಪತ್ರಕರ್ತರು