ಚೆನ್ನೈ(ತಮಿಳುನಾಡು): ಖ್ಯಾತ ಭಾರತೀಯ ಕಲಾವಿದ, ಬರಹಗಾರ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮನೋಹರ್ ದೇವದಾಸ್(Manohar Devadoss) ಅವರು ಬುಧವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮನೋಹರ್ ದೇವದಾಸ್ ಅವರು ಸಾಂಪ್ರದಾಯಿಕ ಕಟ್ಟಡಗಳ ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ಕಲೆ ಮತ್ತು ಚಾರಿಟಿಯಲ್ಲಿ ಅವರ ಸ್ಪೂರ್ತಿದಾಯಕ ಕೆಲಸಕ್ಕಾಗಿ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ (2020) ನೀಡಲಾಯಿತು. ರೆಟಿನೈಟಿಸ್ ಪಿಗ್ಮೆಂಟೋಸಾದಿಂದ ಬಳಲುತ್ತಿದ್ದ ಅವರು ನಿನ್ನೆ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮನೋಹರ್ ದೇವದಾಸ್ ಅವರು ಮಧುರೈನ ಹೆಗ್ಗುರುತುಗಳಾದ ದೇವಾಲಯ ಪ್ರದೇಶಗಳು, ಬೀದಿಗಳು, ಪ್ರಸಿದ್ಧ ಕಟ್ಟಡಗಳು, ವೈಗೈ ನದಿ, ಅನೇಕ ಸಾಂಪ್ರದಾಯಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಆ ಕಲಾಕೃತಿಗಳು ಮಧುರೈನ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿವೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮನೋಹರ್ ದೇವದಾಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Viral News: ವಿಶಾಖಪಟ್ಟಣದಲ್ಲಿ ರೈಲು- ಪ್ಲಾಟ್ಫಾರಂ ನಡುವೆ ಸಿಲುಕಿದ ವಿದ್ಯಾರ್ಥಿನಿ : ಅಘಾತಕಾರಿ Video | Watch