ಬೆಂಗಳೂರು: ಪ್ರಯಾಣಿಕರ ಅನುಕೂಲದ ದೃಷ್ಠಿಯಿಂದ ಬಿಎಂಟಿಸಿಯ ( BMTC Bus ) ಮಾರ್ಗ ಸಂಖ್ಯೆ ಕೆಐಎ-17ಯಲ್ಲಿ ಮಾರ್ಗ ಬದಲಾವಣೆಯನ್ನು ಮಾಡಿ, ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದೆ.
ರಾಜ್ಯದ ಶಾಲಾ ಮಕ್ಕಳಿಗೆ ಬಹುಮುಖ್ಯ ಮಾಹಿತಿ: ಹೀಗಿದೆ 2022-23ನೇ ಸಾಲಿನ ‘ಬಾನ್ ದನಿ ರೇಡಿಯೋ ಪಾಠ’ ಪ್ರಸಾರ ವೇಳಾಪಟ್ಟಿ
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( Bangalore Metropolitan Transport Corporation – BMTC), ಕೆಂಗೇರಿ ಟಿಟಿಎಂಸಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಗೇರಿ ಉಪನಗರ, ಗೊರಗುಂಟೆಪಾಳ್ಯ, ಯಶವಂತಪುರ, ಮತ್ತಿಕೆರೆ, ಬಿಇಎಲ್ ಸರ್ಕಲ್, ಹೆಬ್ಬಾಳ ಮಾರ್ಗವಾಗಿ ಆಚರಣೆಯಲ್ಲಿ ಮಾರ್ಗ ಸಂಖ್ಯೆ ಕೆಐಎ-17 ಬದಲಾವಣೆ ಮಾಡಲಾಗಿರುವುದಾಗಿ ತಿಳಿಸಿದೆ.
ಇನ್ನೂ ದಿನಾಂಕ 05-12-2022 ರಿಂದ ಜಾರಿಗೆ ಬರುವಂತೆ ಕೆಐಎ-17 ಮಾರ್ಗದ ಸಂಖ್ಯೆನ್ನು ಬಿಇಎಂಎಲ್ ಲೇಔಟ್ 5ನೇ ಹಂತದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಯಂಡಹಳ್ಳಿ, ನಾಗರಬಾವಿ ಸರ್ಕಲ್, ಮಾಳಗಾಳ, ಸುಮನಹಳ್ಳಿ, ಗೋರಗೊಂಟೆಪಾಳ್ಯ ಬಿಇಎಲ್ ಸರ್ಕಲ್, ಹೆಬ್ಬಾಳ ಮಾರ್ಗವಾಗಿ ಕಾರ್ಯಾಚರಿಸಲಾಗುತ್ತಿದೆ ಎಂದು ಹೇಳಿದೆ.
BIGG NEWS : ‘ಬಲವಂತದ ಮತಾಂತರ ಗಂಭೀರ ವಿಷಯ’ : ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ