ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೊಲಂಬಿಯಾದಲ್ಲಿ ಮತ್ತೆ ಭೂಕುಸಿತ ಉಂಟಾಗಿದ್ದು, ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನೂ 20 ಜನರು ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ ಎಂದು ಅಧಿಕಾರಿಗಳು ಹೇಳುದ್ದಾರೆ. ಇನ್ನು ನಾಪತ್ತೆಯಾದವರ ರಕ್ಷಣೆಗಾಗಿ ಕಾರ್ಯಾಚರಣೆಗಳನ್ನ ನಡೆಸಲಾಗುತ್ತಿದೆ.
ಭೂಕುಸಿತದಲ್ಲಿ ಸಿಲುಕಿರುವ ಬಸ್ ಮತ್ತು ಮೋಟರ್ಸೈಕಲ್ ಸವಾರನನ್ನ ರಕ್ಷಣಾ ತಂಡಗಳು ಹುಡುಕುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು ಇದುವರೆಗೆ ಒಂಬತ್ತು ಜನರನ್ನ ರಕ್ಷಿಸಲಾಗಿದೆ, ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು. ಸುಮಾರು 20 ಜನರು ಕಾಣೆಯಾಗಿದ್ದಾರೆ.
ನಾಗರಿಕ ರಕ್ಷಣಾ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಬಸ್ಸಿನಲ್ಲಿ ಸುಮಾರು 25 ಪ್ರಯಾಣಿಕರಿದ್ದರು. ಆಗಸ್ಟ್’ನಲ್ಲಿ ಪ್ರಾರಂಭವಾದ ಮಳೆಯಿಂದಾಗಿ ಕೊಲಂಬಿಯಾ 40 ವರ್ಷಗಳಲ್ಲಿ ತನ್ನ ಕೆಟ್ಟ ಹವಾಮಾನವನ್ನು ಎದುರಿಸುತ್ತಿದೆ. ಇಲ್ಲಿಯವರೆಗೆ, ವಿವಿಧ ಘಟನೆಗಳಲ್ಲಿ 270 ಜನರು ಸಾವನ್ನಪ್ಪಿದ್ದಾರೆ.
BIGG NEWS : ಸಹಚರರ ಜೊತೆ ಕೊಡಗಿನ ಹೋಂ ಸ್ಟೇಗೆ ಬಂದಿದ್ದ ಶಾರೀಖ್ : ಸ್ಪೋಟಕ ಮಾಹಿತಿ ಬಯಲು
ಕಾಂಗ್ರೆಸ್ ಮೇಲೆ ನಾಲಿಗೆ ಹರಿಬಿಡುವ ಸಚಿವರೇ ಮಹಾರಾಷ್ಟ್ರದ ಬಗ್ಗೆ ಮೌನವೇಕೆ?: ಟ್ವಿಟ್ ನಲ್ಲಿ ಕಾಂಗ್ರೆಸ್ ಗುಡುಗು