ಕ್ಯಾನ್ಬೆರಾ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್(Anthony Albanese) ಅವರಿಗೆ ಕೊರೊನಾ ಪಾಸಿಟಿವ್ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಆಂಥೋನಿ, ವಾಡಿಕೆಯಂತೆ ನಾನು PCR ಪರೀಕ್ಷೆ ಮಾಡಿಸಿದ್ದೇನೆ. ಅದರಲ್ಲಿ ರಿಸಲ್ಟ್ ಪಾಸಿಟಿವ್ ಬಂದಿದೆ. ಈಗ ನಾನು ಮನೆಯಲ್ಲಿ ಪ್ರತ್ಯೇಕವಾಗಿದ್ದೇನೆ ಹಾಗೂ ಮನೆಯಿಂದಲೇ ನನ್ನ ಕೆಲಸ ಮುಂದುವರೆಸುತ್ತೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷಿಸಿಕೊಳ್ಳಿʼ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ವಾರ, WHO ಡೈರೆಕ್ಟರ್ ಜನರಲ್ ಟೆಡ್ರೊಸ್ ಘೆಬ್ರೆಯೆಸಸ್ WHO ಗೆ ವರದಿಯಾದ ಸಾಪ್ತಾಹಿಕ ಸಾವುಗಳ ಸಂಖ್ಯೆಯು ಕಳೆದ ಐದು ವಾರಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳಿದರು. ಆದರೆ, ಕಳೆದ ವಾರ 8,500 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
BREAKING NEWS: ಚಿತ್ರರಂಗದಲ್ಲಿ ಮತ್ತೊಂದು ಅವಘಡ; ಶೂಟಿಂಗ್ ವೇಳೆ ಕ್ರೇನ್ ವೈಫಲ್ಯದಿಂದ ಸ್ಟಂಟ್ ಮಾಸ್ಟರ್ ನಿಧನ