ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಆಲೂಗಡ್ಡೆಯನ್ನ ತರಕಾರಿಗಳ ರಾಜ ಎಂದು ಕರೆಯಲಾಗುತ್ತೆ. ಮಾರುಕಟ್ಟೆಯಲ್ಲಿ ಆಲೂಗೆಡ್ಡೆ ಬೆಲೆ ಕಡಿಮೆ ಇದ್ದು, ಋತುಮಾನಕ್ಕೆ ಅನುಗುಣವಾಗಿ 5 ರಿಂದ 35 ರೂಪಾಯಿ ಅಲ್ವಾ. ಇತರ ತರಕಾರಿಗಳಿಗೆ ಹೋಲಿಸಿದ್ರೆ, ಆಲೂಗಡ್ಡೆಯ ಬೆಲೆ ತುಂಬಾ ಕಡಿಮೆ. ಆದ್ರೆ, ಇಂದು ನಾವು ಅತ್ಯಂತ ದುಬಾರಿ ವಿಧದ ಆಲೂಗಡ್ಡೆಯ ಬಗ್ಗೆ ತಿಳಿಯಲಿದ್ದೇವೆ. ಈ ಆಲೂಗೆಡ್ಡೆಯ ಬೆಲೆ ಕೆಜಿಗೆ ನೂರೋ, ಇನ್ನುರೋ ಅಲ್ಲ. ಇದರ ಒಂದು ಕಿಲೋ ಆಲೂಗಡ್ಡೆ ಬೆಲೆ ಬರೋಬ್ಬರಿ 50,000 ರೂಪಾಯಿ. ಅಂದ್ರೆ, ಒಂದು ಕೆಜಿ ಆಲೂಗಡ್ಡೆ ಬೆಲೆಗೆ ಚಿನ್ನವನ್ನೇ ಖರೀದಿಸಬಹುದು. ಇನ್ನು ಅತ್ಯಂತ ದುಬಾರಿ ತರಕಾರಿಗಳ ವಿಷಯಕ್ಕೆ ಬಂದರೆ, ಈ ಆಲೂಗೆಡ್ಡೆ ಖಂಡಿತವಾಗಿಯೂ ಆ ಪಟ್ಟಿಯಲ್ಲಿ ನಂ.1 ಸ್ಥಾನವನ್ನ ಆಕ್ರಮಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
ಈ ಅತ್ಯಂತ ದುಬಾರಿ ಆಲೂಗೆಡ್ಡೆಯ ಹೆಸರು ಲೆ ಬೊನೊಟ್ (Le Bonot). ಇದು ಫ್ರಾನ್ಸ್ನಲ್ಲಿ ಬೆಳೆಯುವ ಆಲೂಗಡ್ಡೆ ಮತ್ತು ಭಾರತದಲ್ಲಿ ಸಿಗುವುದಿಲ್ಲ. ಇದು ಫ್ರೆಂಚ್ ದ್ವೀಪವಾದ Île de Noirmoutierನಲ್ಲಿ ಪ್ರತ್ಯೇಕವಾಗಿ ಬೆಳೆಯುತ್ತದೆ. ಈ ಆಲೂಗಡ್ಡೆಯನ್ನ ಬೆಳೆಯಲು ವಿಶೇಷ ರೀತಿಯ ಮರಳು ಮಣ್ಣನ್ನ ಬಳಸಲಾಗುತ್ತದೆ. ಇದನ್ನ ಕಡಲಕಳೆ ಬೆಳೆಯಲು ಗೊಬ್ಬರವಾಗಿ ಬಳಸಲಾಗುತ್ತದೆ. ಲೆ ಬೊನೊಟ್ 50 ಚದರ ಮೀಟರ್ ಭೂಮಿಯಲ್ಲಿ ಬೆಳೆಯುತ್ತದೆ.
ಈ ಆಲೂಗಡ್ಡೆಯ ಅರ್ಧ ಕಿಲೋ ಬೆಲೆ 250 ಯುರೋಗಳು ಅಂದರೆ ಸುಮಾರು 22,000 ರಿಂದ 23,000 ರೂಪಾಯಿ. ಈ ಆಲೂಗೆಡ್ಡೆ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೆ, ಇಲ್ಲಿ ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಈ ದುಬಾರಿ ಆಲೂಗಡ್ಡೆ ವರ್ಷದಲ್ಲಿ 10 ದಿನ ಮಾತ್ರ ಲಭ್ಯ. ಈ ಉಪ್ಪು ಆಲೂಗಡ್ಡೆಯನ್ನ ಹೆಚ್ಚಾಗಿ ಮನೆಯಲ್ಲಿ ಸಲಾಡ್ ಮತ್ತು ಸೂಪ್ ಮಾಡಲು ಬಳಸಲಾಗುತ್ತದೆ. ಇದು ಅನೇಕ ರೋಗಗಳ ಮೇಲೆ ಪರಿಣಾಮ ಬೀರುತ್ತದೆ.
BREAKING NEWS : ಮೂಡಿಗೆರೆಯಲ್ಲಿ ಭಾರೀ ಉಪಟಳ ಕೊಟ್ಟಿದ್ದ ಮತ್ತೊಂದು ‘ಪುಂಡಾನೆ’ ಸೆರೆ
‘ಮೊಸರು’ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ.? ಕೆಟ್ಟದಾ.? ತಜ್ಞರು ಹೇಳುವುದೇನು ಗೊತ್ತಾ?