ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ( PSI Recruitment Scam ) ಸಂಬಂಧ ಮತ್ತೊಂದು ಸ್ಪೋಟಕ ಟ್ವಿಸ್ಟ್ ದೊರೆತಿದೆ. ಪರೀಕ್ಷಾ ಅಕ್ರಮದ ಬಗ್ಗೆ ಪರೀಕ್ಷಾ ಉಸ್ತುವಾರಿ ಅಮೃತ್ ಪಾಲ್ ಗೆ ಪರೀಕ್ಷೆಯ ಬಳಿಕ ಅಭ್ಯರ್ಥಿಗಳು ದೂರು ನೀಡಿದ್ದರೂ, ಗೊತ್ತಿದ್ದೂ ಗೊತ್ತಿಲ್ಲದಂತೆ ವರ್ತಿಸಿರುವಂತ ಮತ್ತೊಂದು ಸ್ಪೋಟಕ ಮಾಹಿತಿಯನ್ನು ಸಿಐಡಿ ರಿವೀಲ್ ಮಾಡಿದೆ.
ರೌಡಿ ಮೋರ್ಚಾ ಕಟ್ಟಿಕೊಂಡು ಈ ಸವಾಲು ಹಾಕಿದಿರಾ ಬಸವರಾಜ ಬೊಮ್ಮಾಯಿ ಅವರೇ?: ಟ್ವಿಟ್ ನಲ್ಲಿ ಕಾಂಗ್ರೆಸ್ ಪ್ರಶ್ನೆ
ಪಿಎಸ್ಐ ನೇಮಕಾತಿ ಅಕ್ರಮವನ್ನು ಸ್ವತಹ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದಂತ ಅಮೃತ್ ಪಾಲ್ ಅವರೇ ಆರ್ಡರ್ ಮಾಡಿಸಿ ಅಕ್ರಮ ಮಾಡಿದ್ದಾರೆ ಎನ್ನಲಾಗಿದೆ. ಅವರ ಆಣತಿಯಂತೆಯೇ ಪಿಎಸ್ಐ ನೇಮಕಾತಿ ಸ್ಕ್ಯಾಮ್ ನಡೆದಿದೆ ಎನ್ನುವಂತ ಸ್ಪೋಟಕ ಮಾಹಿತಿಯನ್ನು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಅಂಗವಿಕಲರಿಗೆ ಭರ್ಜರಿ ಗುಡ್ ನ್ಯೂಸ್: ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ, ವಸತಿ ಯೋಜನೆಯಲ್ಲಿ ಶೇ.2ರಷ್ಟು ಮೀಸಲಾತಿ
ಇನ್ನೂ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಅಮೃತ್ ಪಾಲ್ ಅವರನ್ನು ಜೂನ್ 6, 12ರಂದು ಭೇಟಿಯಾಗಿದ್ದಂತ ಅಭ್ಯರ್ಥಿಗಳು ಅಕ್ರಮದ ಬಗ್ಗೆ ದೂರು ನೀಡಿದ್ದರು. ಈ ದೂರಿನಲ್ಲಿ ಬ್ಲೂ ಟೂತ್ ಬಳಸಿ, ಪರೀಕ್ಷೆಯಲ್ಲಿ ಅಕ್ರಮ ನಡೆಸಲಾಗಿದೆ. ಸೂಕ್ತ ತನಿಖೆ ನಡೆಸಿ, ತಪ್ಪಿ ತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಲಾಗಿತ್ತು.
ಆದ್ರೇ ಅಕ್ರಮದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ಕೈಗೊಳ್ಳಬೇಕಿದ್ದಂತ ಅಮೃತ್ ಪಾಲ್ ಮಾತ್ರ ಅಕ್ರಮದ ಅರಿವಿದ್ದರೂ ಕ್ರಮ ಜರುಗಿಸದೇ ಕಳ್ಳಾಟ ಮೆರೆದಿರುವುದನ್ನು ಸಿಐಡಿ ತನಿಖೆಯಲ್ಲಿ ರಿವೀಲ್ ಮಾಡಿದೆ ಎನ್ನಲಾಗಿದೆ. ಈ ಎಲ್ಲಾ ಅಂಶಗಳನ್ನು ಸಿಐಡಿ ತನಿಖೆಯ ಮಾಹಿತಿಯಲ್ಲಿ ದಾಖಲಿಸಿರೋದಾಗಿ ಹೇಳಲಾಗುತ್ತಿದೆ. ಈ ಮೂಲಕ ಅಮೃತ್ ಪಾಲ್ ಅವರ ಮತ್ತೊಂದು ಸ್ಪೋಟಕ ಹಗರಣ ಬೆಳಕಿಗೆ ಬಂದಂತೆ ಆಗಿದೆ.
‘ದ್ವಿತೀಯ PUC ಪರೀಕ್ಷಾ ಶುಲ್ಕ’ ಸಂದಾಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ದಿನಾಂಕ ವಿಸ್ತರಣೆ
ಇನ್ನೂ ಇದಷ್ಟೇ ಅಲ್ಲದೇ ಪಿಎಸ್ಐ ನೇಮಕಾತಿಯ ಪರೀಕ್ಷಾ ಆಕಾಂಕ್ಷಿಗಳಿಂದಲೂ ಅಮೃತ್ ಪಾಲ್ ಹಣ ಹೇಗೆ ಸಂಗ್ರಹಿಸಲಾಗಿದೆ ಎಂಬುದನ್ನು ಸಿಐಡಿ ಲೊಕೇಷನ್ ಸಹಿತ ಪತ್ತೆ ಹಚ್ಚಿದೆ ಎನ್ನಲಾಗುತ್ತಿದೆ. 1.35 ಕೋಟಿ ಹಣವನ್ನು ನೀಲಿ ಬ್ಯಾಗ್ ನಲ್ಲಿ ಡಿವೈಎಸ್ಪಿ ಶಾಂತಕುಮಾರ್ ಹಡ್ಸನ್ ಸರ್ಕಲ್ ಬಳಿಯಲ್ಲಿ ಪಡೆದು, ಬಳಿಕ ಅಮೃತ್ ಪಾಲ್ ಗೆ ನೀಡಿರುವಂತ ಮಾಹಿತಿಯನ್ನು ಸಿಐಡಿ ಸಂಗ್ರಹಿಸಿದೆ ಎನ್ನಲಾಗಿದೆ.