ದಾವಣಗೆರೆ: ಒಂದೆಡೆ ಬಿಜೆಪಿಗೆ ರೌಡಿಗಳ ಸೇರ್ಪಡೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ರಾಜಕಾರಣದಿಂದ ಹಣ ಸಂಪಾದಿಸೋದಕ್ಕಾಗಿ ಐಎಎಸ್ ಅಧಿಕಾರಿಗಳು, ರೌಡಿಗಳು, ಗೂಂಡಾಗಳು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ರಾಜಯಕೀಯಕ್ಕೆ ಈಗ ಸೇರುವವರ ಸಂಖ್ಯೆ ಹಚ್ಚಾಗಿದೆ. ಇದಕ್ಕಾಗಿ ಅನೇಕರು ಸಾಲುಗಟ್ಟಿ ಕೂಡ ನಿಂತಿದ್ದಾರೆ. ಎಲ್ಲಿಯೂ ಇಲ್ಲದಂತ ಸಂಪಾದನೇ ರಾಜಕೀಯದಿಂದ ಬರುತ್ತಿದೆ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದರು.
ಇದೇ ವೇಳೆ ಬೆಂಗಳೂರಿನ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಕುರಿತಂತೆ ಮಾತನಾಡಿದಂತ ವರು, ಇದು ಸಂವಿಧಾನ ವಿರುದ್ಧವಾದ್ದಾಗಿದೆ. ಇದನ್ನು ಯಾರೂ ಸರಿ ಅಂತ ಒಪ್ಪುವುದಿಲ್ಲ. ಚುನಾವಣಾ ಆಯೋಗವು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಎಲ್ಲಾ ಘಟನೆ ನೋಡ್ತಾ ಇದ್ದರೇ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆಯೋ ಅರ್ಥವೇ ಆಗುತ್ತಿಲ್ಲ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದರು.