ಬೆಂಗಳೂರು: ಬಿಜೆಪಿಯ 40% ಸರ್ಕಾರ ಬೆಂಗಳೂರಿನ ಭೂಗಳ್ಳರ ಜೊತೆಯು ಶಾಮಿಲಾಗಿದೆ. ಸರ್ಕಾರಿ ಜಾಗವನ್ನು ಕಬ್ಬಡಿಸುವವರಿಗೆ ಇಲಾಖೆಯೇ ಹಸಿರು ನಿಶಾನೆ ನೀಡುತ್ತಿದೆ. ಇದಕ್ಕೆ ಉದಾಹರಣೆ ಬಿ ಟಿ ಎಂ ಲೇಔಟ್ಗೆ ಸಂಬಂಧಿಸಿದ ಸಿಎ ನಿವೇಶನ 12/1, ಇದನ್ನು 2019ರಲ್ಲಿ ಬಿಡಿಎ ನಿಯಮಾನುಸಾರ ಕೇಂದ್ರ ಸರ್ಕಾರದ ಸ್ವಾಮೀಜಿಗೆ ಒಳಪಟ್ಟಂತಹ ಭಾರತ್ ಆಯಿಲ್ ಕಾರ್ಪೊರೇಷನ್ ಗೆ ಹಂಚಿಕೆ ಮಾಡುತ್ತಾರೆ. ಈ ಕಂಪನಿ ಅಲ್ಲಿ ಕೆಲಸ ಮಾಡಲು ಹೋದಾಗ ಸ್ಥಳೀಯರು ಬಿಜೆಪಿ ನಾಯಕರು ಅದಕ್ಕೆ ಅಡ್ಡಿಪಡಿಸುತ್ತಾರೆ. ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ಇದ್ದರೂ ಕೂಡ ಈ ನಿವೇಶನವನ್ನು ಈ ಸಂಸ್ಥೆಗೆ ನೀಡಿಲ್ಲ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಕಿಡಿಕಾರಿದ್ದಾರೆ.
BIG NEWS: ಬೆಸ್ಕಾಂನಿಂದ 24 ಗಂಟೆ ‘ವೆಬ್ ಪೋರ್ಟಲ್’ ಸೇವೆ ಪುನರಾರಂಭ: ಈ ಎಲ್ಲಾ ಸೌಲಭ್ಯ ಆನ್ ಲೈನ್ ನಲ್ಲೇ ಲಭ್ಯ
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಡಬಲ್ ಇಂಜಿನ್ ಎನ್ನುವ ಸರ್ಕಾರ ಕಮಿಷನ್ ಸಿಗುತ್ತದೆ ಎಂದರೆ ಯಾವುದಕ್ಕೂ ಆದ್ಯತೆ ನೀಡುವುದಿಲ್ಲ. ಕೇಂದ್ರ ಸರ್ಕಾರದ ಸಂಸ್ಥೆಗೆ ಹಂಚಿಕೆಯಾಗಿರುವ ಸಿಎನಿವೇಶನ ಎರಡು ಮೂರು ವರ್ಷವಾದರೂ ನೀಡುವುದಿಲ್ಲ ಎಂದರೆ ಭೂಗಳ್ಳರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದರೆ, ಇವರಿಂದ ಸಂಸ್ಥೆ ಗೆ ಸೇರಬೇಕಾದ ಜಾಗ ರಕ್ಷಣೆ ಮಾಡುತ್ತಿಲ್ಲ ಎಂದರೆ, ಕೇಂದ್ರವನ್ನು ಲೆಕ್ಕಿಸದೆ ಕಮಿಷನ್ ಧಂದೆಗೆ ಇಳಿದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಜುಲೈ 28ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ವಿಚಾರವನ್ನು ಗಮನಕ್ಕೆ ತಂದಿದ್ದೆ. ನಂತರ ಇಪ್ಪತ್ರವನ್ನು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕಳುಹಿಸಿ ಕ್ರಮ ಕೈಗೊಳ್ಳುವಂತೆ ಹೆಸರಿಗಷ್ಟೇ ಸೂಚಿಸುತ್ತಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಯಿಲ್ ಕಾರ್ಪೊರೇಷನ್ ಅಧಿಕಾರಿಗಳು ಪೊಲೀಸ್ ಕಮಿಷನರ್, ಬಿಡಿಎ ಆಯುಕ್ತರು, ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದರು ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿಯವರು ಮಾತೆತ್ತಿದರೆ ದಾಖಲೆ ನೀಡಿ ಎಂದು ಕೇಳುತ್ತಾರೆ ಎಂದು ಹೇಳಿದರು.
ಮತದಾರರ ಮಾಹಿತಿ ಕೊಡಗು ಪ್ರಕರಣದಲ್ಲೂ ಕೂಡ ಬಿಜೆಪಿ ನಾಯಕರು ದಾಖಲೆ ನೀಡಿ ಎಂದು ಹಾರೈಕೆ ಉತ್ತರ ನೀಡಿದ್ದರು. ಆದರೆ ಈಗ ಇಬ್ಬರು ಈ ಎಸ್ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೆಳವಣಿಗೆ ನಡೆದಿದೆ. 40% ಕಮಿಷನ್ ಧಂದೆಗಾಗಿ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಲಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಮುಖ್ಯಮಂತ್ರಿಗಳು ಬಾಯಿ ಮಾತಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿದರೆ ಆಗುವುದಿಲ್ಲ. 40% ಕಮಿಷನ್ ಗಾಗಿ ಸರ್ಕಾರವನ್ನೇ ಮಾರಾಟ ಮಾಡುವ ಕೆಲಸಕ್ಕೆ ಮುಂದಾಗಬೇಡಿ. ಕೇಂದ್ರ ಸರ್ಕಾರದ ಸಮಯದ ಕಂಪನಿಗೆ ಅಡ್ಡಿಪಡಿಸುತ್ತಿರುವ ಅಧಿಕಾರಿಗಳು ಹಾಗೂ ಭೂಗಳ್ಳರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
BREAKING NEWS : ಬಳ್ಳಾರಿಯಲ್ಲಿ ಘೋರ ಘಟನೆ : ಹುಚ್ಚು ನಾಯಿ ದಾಳಿಗೆ ಇಬ್ಬರು ಮಕ್ಕಳು ಬಲಿ
ಎರಡನೇ ವಿಚಾರ ಎಂದರೆ, ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುವಾಗ ರಾವಣ ಎಂಬ ಪದವನ್ನು ಬಳಸಿದ್ದಾರೆ. ಇನ್ನು ಮುಂದೆ ಬಿಜೆಪಿಯವರೇ ವಿರೋಧಪಕ್ಷದ ನಾಯಕರು ಏನು ಮಾತನಾಡಬೇಕು ಎಂದು ಭಾಷಣ ಬರೆದುಕೊಟ್ಟರೆ ಚೆನ್ನಾಗಿರುತ್ತದೆ. ಮಂಗಳೂರಿನ ಭಾಗದ ಕಾಲೇಜಿನಲ್ಲಿ ಶಿಕ್ಷಕರು ಒಬ್ಬರು ವಿದ್ಯಾರ್ಥಿಗೆ ಕಸಬ್ ಎಂದು ಕರೆದಿದ್ದನ್ನು ಸಮರ್ಥಿಸಿಕೊಂಡ ಶಿಕ್ಷಣ ಸಚಿವರು ನಮ್ಮಲ್ಲಿ ಹಲವು ಬಾರಿ ರಾವಣ ಎಂಬ ಪದ ಪ್ರಯೋಗವನ್ನು ಮಾಡುತ್ತೇವೆ ಹೀಗಾಗಿ ಕಸಬ್ ಎಂದು ಹೇಳಿರುವುದು ತಪ್ಪೇನಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ ಎಂದರು.
ಅತ್ತ ಗುಜರಾತಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾವಣ ಎಂಬ ಪದ ಬಳಕೆಗೆ ಸಹಿಸಿಕೊಳ್ಳಲಾಗದ ಬಿಜೆಪಿಯವರು ಈ ದೇಶವನ್ನು ಯಾವ ಕಡೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬಿಜೆಪಿ ನಾಯಕರು ಖರ್ಗೆಯವರು ಕೊಟ್ಟಿರುವ ಹೇಳಿಕೆಯನ್ನು ಆರೋಗ್ಯಕರ ರೀತಿಯಲ್ಲಿ ಸ್ವೀಕರಿಸು ಬೇಕು. ಸಂಸದೀಯ ವ್ಯವಸ್ಥೆಯಲ್ಲಿ ಆರೋಗ್ಯಕರ ಟೀಕೆಗೆ ಅವಕಾಶ ಇರುತ್ತದೆ. ಖರ್ಗೆಯವರು ತಮ್ಮ ಸಂಸದೀಯ ಜೀವನದ ಹಾದಿಯಲ್ಲಿ ಇಂದಿಗೂ ಆ ಸಂಸದೀಯ ಪದದಿಂದ ಟೀಕೆ ಮಾಡಿದ ಉದಾಹರಣೆಗಳಿಲ್ಲ. ಪ್ರಧಾನ ಮಂತ್ರಿಗಳು ಇಂತಹ ಟೀಕೆಗಳನ್ನು ಸ್ವೀಕರಿಸಿ ರಾಜಕೀಯವಾಗಿ ಉತ್ತರ ನೀಡಬೇಕು. ಅದನ್ನು ಬಿಟ್ಟು ಹವಾ ಹೇಳನ ಮಾಡುವುದು ಒಳ್ಳೆಯ ರೀತಿಯ ಬೆಳವಣಿಗೆಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಆರ್&ಡಿ ಹಾಗೂ ತಯಾರಿಕಾ ಘಟಕಗಳ ಸ್ಥಾಪನೆಗೆ ಯುಕೆ ಹೂಡಿಕೆದಾರರಿಗೆ ಸಿಎಂ ಬೊಮ್ಮಾಯಿ ಆಹ್ವಾನ