ಬೆಳಗಾವಿ : ಶಾಲಾ ವಿದ್ಯಾರ್ಥಿಗಳಿದ್ದ ಬಸ್ಸಿನ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 50 ಮಂದಿ ವಿದ್ಯಾರ್ಥಿಗಳ ಪ್ರಾಣ ಉಳಿದಿದೆ.
ಜಿಲ್ಲೆಯ ಸಂಕೇಶ್ವರದ ಎಸ್ .ಡಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಶಿಕ್ಷಕರ ಜೊತೆಗೆ ಮಹಾರಾಷ್ಟ್ರದ ಮಹಾಬಲೇಶ್ವರಕ್ಕೆ ಹೋಗುತ್ತಿದ್ದರು. ಈ ವೇಳೆ ಬಸ್ಸಿನ ಬ್ರೇಕ್ ಮಹಾಬಲೇಶ್ವರ ಘಾಟ್ ನಲ್ಲಿ ಫೇಲ್ ಆಗಿದೆ. ಕೂಡಲೇ ಎಚ್ಚೆತ್ತ ಚಾಲಕ ಬಸ್ಸನ್ನು ಪಕ್ಕದಲ್ಲಿದ್ದ ಗುಡ್ಡದ ಮಣ್ಣಿನ ಭಾಗಕ್ಕೆ ಗುದ್ದಿಸಿದ್ದಾನೆ, ಇದರಿಂದ ಬಸ್ ಇಂಜಿನ್ ಬಂದ್ ಆಗಿದೆ. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದೆ.
‘ಅಮಿತ್ ಶಾ’ ಏನು ಮಾವನ ಮನೆಗೆ ಹೋಗಿ ಬಂದರಾ..? : ಸಿದ್ದರಾಮಯ್ಯ ವ್ಯಂಗ್ಯ