ಬಾಗಲಕೋಟೆ: ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಶುರುವಾದಂತ ಜಗಳ ಎರಡು ಗುಂಪುಗಳ ನಡುವೆ ಮಾರಾಮಾರಿಯೇ ನಡೆಯುವಂತೆ ಆಗಿದೆ. ಈ ಮಾರಾಮಾರಿಯಲ್ಲಿ ಇಬ್ಬರು ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
Job Alert: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ‘ನಮ್ಮ ಕ್ಲಿನಿಕ್’ನಲ್ಲಿ ಖಾಲಿ ಇರುವ ‘ವೈದ್ಯರ ಹುದ್ದೆ’ ಅರ್ಜಿ ಆಹ್ವಾನ
ಬಾಗಲಕೋಟೆಯ ಮುಂಚಖಂಡಿ ಕ್ರಾಸ್, ವಿದ್ಯಾಗಿರಿಯಲ್ಲಿಯೇ ಎರಡು ಗುಂಪುಗಳ ನಡುವೆ ಹೊಡೆದಾಟ ಉಂಟಾಗಿರೋದಾಗಿದೆ. ಬೈಕ್ ಗೆ ಡಿಕ್ಕಿ ಹೊಡೆಸಿ ಮೊದಲು ಲಕ್ಷ್ಮಣ ನಾಯಕ ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಈ ಬಳಿಕ ಲಕ್ಷ್ಮಣ್ ಸಹಚರರು ಬಸವರಾಜ ಮೇಲೆ ಹಲ್ಲೆ ನಡೆಸಿದ್ದಾರೆ.
ಕ್ಷುಲ್ಲಕ ಕಾರಣದಿಂದಾಗಿ ಉಂಟಾದಂತ ಜಗಳ ಮಾರಾಮಾರಿಗೆ ತಿರುಗಿದೆ. ಎರಡು ಗುಂಪುಗಳ ನಡುವೆ ಜಗಳದಲ್ಲಿ ಲಕ್ಷ್ಮಣ ನಾಯಕ ಹಾಗೂ ಬಸವರಾಜ ಕೆಂಚಣ್ಣನವರ ಎಂಬುವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಜಗಳದಲ್ಲಿ ಗಾಯಗೊಂಡಂತ ಬಸವರಾಜ ಕೆಂಚಣ್ಣನವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರೇ, ಲಕ್ಷ್ಮಣನಾಯಕನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.