ಬೆಂಗಳೂರು: ಕೆಎಂಎಫ್ ನಿಂದ ನಿನ್ನೆ ಹಾಲು, ಮೊಸರಿನ ದರ ಹೆಚ್ಚಳ ಮಾಡೋದಾಗಿ ಘೋಷಣೆ ಮಾಡಲಾಗಿತ್ತು. ಘೋಷಿತ ಪರಿಷ್ಕೃತ ದರಗಳು ಇಂದಿನಿಂದ ಜಾರಿಗೆ ಬಂದಿವೆ. ಹೀಗಿದ್ದೂ ಹೋಟೆಲ್ ಉಪಹಾರಗಳ ದರಗಳನ್ನು ಹೆಚ್ಚಳ ಮಾಡುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಹೋಟೆಲ್ ಆಹಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಮಿಂಚಿನ ವೇಗದಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಫೈಲ್ ಕ್ಲಿಯರ್ : ಸುಪ್ರೀಂ ಕೋರ್ಟ್
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಅವರು, ಇಂದಿನಿಂದ ಹಾಲು, ಮೊಸರಿನ ದರ 2 ರೂ ಹೆಚ್ಚಳವಾಗಿದೆ. ಆದ್ರೇ ಹೋಟೆಲ್ ಆಹಾರ, ಕಾಫಿ, ಟೀ ಬೆಲೆಗಳನ್ನು ಈ ಕೂಡಲೇ ಹೆಚ್ಚಳ ಮಾಡುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
BREAKING NEWS: ‘ಕರ್ನಾಟಕ ಕಾಂಗ್ರೆಸ್’ನಲ್ಲಿ ಮಹತ್ವದ ಬದಲಾವಣೆ: ಐದು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ
ಅಂದಹಾಗೇ ಕೆಎಂಎಫ್ ನಿಂದ ಹಾಲು, ಮೊಸರಿನ ದರವನ್ನು ಇಂದಿನಿಂದ ಜಾರಿಗೆ ಬರುವಂತೆ 2 ರೂ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ಜಾರಿಗೆ ಬಂದ ಕಾರಣ ನಂದಿನ ಟೋನ್ಡ್ ಹಾಲಿನ ದರ ಲೀಟರ್ ಗೆ ರೂ.37 ರಿಂದ 39ಕ್ಕೆ ಹೆಚ್ಚಳವಾಗಿದೆ.