ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನಲ್ಲಿ ವಿವಿಧ ವಿದ್ಯುತ್ ನಿರ್ವಹಣಾ ಕಾಮಗಾರಿಗಳ ಹಿನ್ನಲೆಯಲ್ಲಿ, ನ.24ರ ನಾಳೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಈ ಕುರಿತಂತೆ ಮೆಸ್ಕಾಂ ಎಇಇ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 24-11-2022ರಂದು ಸೊರಬ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಫೀಡರ್ ಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇದಕ್ಕೆ ತ್ರೈಮಾಸಿಕ ನಿರ್ವಣಹಾ ಕಾಮಗಾರಿ ಕಾರಣವಾಗಿದೆ ಎಂದಿದೆ.
ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ನಾಳೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಗುಡವಿ, ಬಳ್ಳಿಬೈಲು, ಕಮ್ಮೂರು, ದೇವತಿಕೊಪ್ಪ, ಹಾಲಗಳಲೆ, ತಳೇಬೈಲು, ಕುಪ್ಪೆ, ಬಿಳಾಗಿ, ಪುರ, ಮಂಚಿ, ಉರಗನಹಳ್ಳಿ, ಅಂಡಿಗೆ, ಕೊಡಕಣಿಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಆಗಲಿದೆ.
ಇದಲ್ಲದೇ ಕಲ್ಲಂಬಿ, ಕಡಸೂರು, ಯಲವಳ್ಳಿ, ನಿಸ್ರಾಣಿ, ಹೆಗ್ಗೋಡು, ಕರಡಿಗೆರೆ, ನಡಹಳ್ಳಿ, ಹಾಗೂ ಸೊರಬ ಪುರಸಭೆ, ಹಳೆಸೊರಬ, ಮುಟುಗುಪ್ಪೆ, ಕೊಡಕಣಿ, ಅಂಡಿಗೆ, ಹೆಗ್ಗೋಡು ಹಾಗೂ ಶಿಗ್ಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಇರೋದಿಲ್ಲ ಎಂಬುದಾಗಿ ಮೆಸ್ಕಾಂ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ