ಪಶ್ಚಿಮ ಬಂಗಾಳ : ಮಾಲ್ಡಾದಲ್ಲಿ ಕಚ್ಚಾ ಬಾಂಬ್ ಸ್ಫೋಟದಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಮಾಲ್ಡಾದ ಮಾಣಿಕ್ಚಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಕ್ಕಳು ಬಾಲ್ ಆಡುವಂತೆ ಆಟವಾಡಲು ಆರಂಭಿಸಿದಾಗ ಬಾಂಬ್ ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ ಒಂದು ತಿಂಗಳೊಳಗೆ ಇದೇ ರೀತಿಯ ಹಲವು ಘಟನೆಗಳು ವರದಿಯಾಗಿವೆ. ಇದರಲ್ಲಿ ಕೆಲವು ಮಕ್ಕಳು ಸಾವನ್ನಪ್ಪಿದರು ಮತ್ತು ಇತರರು ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ನರೇಂದ್ರಪುರ ಪ್ರದೇಶದಲ್ಲಿ ಕೆಲವು ದುಷ್ಕರ್ಮಿಗಳು ಕಚ್ಚಾ ಬಾಂಬ್ಗಳನ್ನು ಎಸೆದ ನಂತರ ಐವರು ಮಕ್ಕಳು ಗಾಯಗೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾಗ ಮೈದಾನದ ಮೂಲೆಯೊಂದರಲ್ಲಿ ಕೆಲವು ಕೆಲ ಕಿಡಿಗೇಡಿಗಳು ಬಾಂಬ್ ಗಳನ್ನು ಇಟ್ಟುಕೊಂಡಿದ್ದರು. ಅವರು ಸ್ಥಳದಲ್ಲಿದ್ದು ಮಕ್ಕಳನ್ನು ಹೆದರಿಸಿ ಓಡಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಹುಡುಗರು ಅವರ ಮಾತನ್ನು ಕೇಳದಿದ್ದಾಗ, ದುಷ್ಕರ್ಮಿಗಳು ಅವರ ಮೇಲೆ ಎರಡು ಬಾಂಬ್ಗಳನ್ನು ಎಸೆದಿದ್ದು, ಐವರು ಮಕ್ಕಳು ಗಾಯಗೊಂಡಿದ್ದಾರೆ.
Relationship: ಹುಡುಗೀರು ಬಾಯ್ಫ್ರೆಂಡ್ ಜೊತೆ ಹೀಗೆಲ್ಲಾ ಮಾಡಿದ್ರೆ ಬ್ರೇಕ್ಅಪ್ ಆಗೋದು ಗ್ಯಾರಂಟಿ