ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಕರ್ಪೂರವನ್ನು ಪೂಜೆ ಬಳಕೆ ಮಾಡುತ್ತೇವೆ. ಇದನ್ನು ಕೆಲವು ಔಷಧಿಗಳ ತಯಾರಿಕೆಯಲ್ಲೂ ಬಳಸುತ್ತಾರೆ. ಆದರೆ ಚರ್ಮದ ಕಾಂತಿಯನ್ನು ಹೆಚ್ಚಿಸಲು ಬಳಸುತ್ತಾರೆ ಎಂಬ ವಿಚಾರ ತಿಳಿರಲು ಸಾಧ್ಯವಿಲ್ಲ.
ಕರ್ಪೂರ ಸಾಕಷ್ಟು ಆರೋಗ್ಯ ಲಾಭ ನೀಡುತ್ತದೆ. ಇದು ತ್ವಚೆಯ ಅನೇಕ ಸಮಸ್ಯೆ ಪರಿಹರಿಸಲು ಸಹಾಯ ಮಾಡುತ್ತದೆ. ಇದರಿಂದ ಅನೇಕ ಪ್ರಯೋಜನಗಳಿವೆ.
ಮೊಡವೆ ನಿವಾರಣೆ
ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಸಾಮಾನ್ಯವಾಗಿ ಮೊಡವೆ ಸಮಸ್ಯೆ ಎದುರಿಸುತ್ತಾರೆ. ಅಂತಹವರು ಕರ್ಪೂರವನ್ನು ಬಳಸಿದರೆ ಸಮಸ್ಯೆ ಕಡಿಮೆ ಆಗುತ್ತದೆ. ಮೊಡವೆಗಳಿಂದ ಉಂಟಾದ ಕಲೆಗಳನ್ನು ತೆಗೆದು ಹಾಕುತ್ತದೆ. ಒಂದು ಬಟ್ಟಲಿನಲ್ಲಿ 1 ಚಮಚ ಕರ್ಪೂರದ ಪುಡಿ ಹಾಗೂ ಅದಕ್ಕೆ ಎರಡು ಚಮಚ ಕ್ಯಾಸ್ಟರ್ ಆಯಿಲ್ ಹಾಕಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ ಸುಮಾರು 20 ನಿಮಿಷ ಬಿಟ್ಟು ಸರಳ ನೀರಿನಿಂದ ಮುಖ ಸ್ವಚ್ಛಗೊಳಿಸಿ. ವಾರಕ್ಕೊಮ್ಮೆ ಮಾಡಿ.
ಸುಡುವ ಸಂವೇದನೆ ಕಡಿಮೆ
ಸುಟ್ಟ ಗಾಯದ ಮೇಲೆ ಕರ್ಪೂರ ಹಚ್ಚಿದರೆ, ಅದು ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಮತ್ತು ಗಾಯವನ್ನು ಗುಣಪಡಿಸುವ ಪ್ರಕ್ರಿಯೆಯು ತುಂಬಾ ವೇಗವಾಗುತ್ತದೆ. ಕಿರಿಕಿರಿ ಕಡಿಮೆ ಮಾಡುತ್ತದೆ. ಸುಟ್ಟ ಗಾಯ ಗುಣಪಡಿಸಲು ಎಳ್ಳೆಣ್ಣೆ, ಜೇನುತುಪ್ಪ ಮತ್ತು ಕರ್ಪೂರವನ್ನು ಔಷಧದಲ್ಲಿ ಬಳಸುತ್ತಾರೆ.
ತ್ವಚೆಯ ತುರಿಕೆ ನಿವಾರಣೆ
ಕರ್ಪೂರವು ತುರಿಕೆ ಕಡಿಮೆ ಮಾಡುವ ಗುಣ ಮತ್ತು ಗಾಯದ ಸೋಂಕು ತಡೆಯುವ, ಉರಿಯೂತ ಕಡಿಮೆ ಮಾಡುವ ಗುಣಲಕ್ಷಣ ಹೊಂದಿದೆ. ಈ ಎಲ್ಲಾ ಗುಣಲಕ್ಷಣಗಳು ಚರ್ಮದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಕರ್ಪೂರವನ್ನು ಯಾವ ಯಾವ ಸ್ತುಗಳ ಜೊತೆ ಮಿಶ್ರಣ ಮಾಡಿ ಬಳಸಬೇಕು ?
ಕರ್ಪೂರ ಮತ್ತು ಬಾದಾಮಿ ಎಣ್ಣೆ
ಬಟ್ಟಲಿನಲ್ಲಿ ಚಮಚ ಕರ್ಪೂರದ ಪುಡಿ ಮತ್ತು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೊಮ್ಮೆ ಮಾಡಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.
ಕರ್ಪೂರ ಮತ್ತು ಮುಲ್ತಾನಿ ಮಿಟ್ಟಿ
ಕರ್ಪೂರದ ಪುಡಿ, ಎರಡು ಚಮಚ ಮುಲ್ತಾನಿ ಮಿಟ್ಟಿ, ರೋಸ್ ವಾಟರ್ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಇದು ಸಹ ತ್ವಚೆಯನ್ನು ಅಂದವಾಗಿಸುತ್ತದೆ.
ಕರ್ಪೂರ ಮತ್ತು ತೆಂಗಿನ ಎಣ್ಣೆ
ಎರಡು ಚಮಚ ತೆಂಗಿನ ಎಣ್ಣೆ ಮತ್ತು ಚಮಚ ಕರ್ಪೂರದ ಪುಡಿ ಮಿಶ್ರಣ ಮಾಡಿ. ಅನ್ವಯಿಸಿ, 20 ನಿಮಿಷ ಬಿಟ್ಟು ಮುಖ ತೊಳೆಯಿರಿ.
ಕರ್ಪೂರ ಮತ್ತು ಕಡಲೆಹಿಟ್ಟು
ಚಮಚ ಕರ್ಪೂರದ ಪುಡಿ, ಎರಡು ಚಮಚ ಕಡಲೆಹಿಟ್ಟು ಮತ್ತು 2 ಚಮಚ ತೆಂಗಿನೆಣ್ಣೆ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿ. ಅರ್ಧ ಘಂಟೆ ಬಿಟ್ಟು, ಮಸಾಜ್ ಮಾಡುತ್ತಾ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಬೆಲೆ ಏರಿಕೆ ನಡುವೆ ಗುಡ್ ನ್ಯೂಸ್ ; ಖಾದ್ಯ ತೈಲ ಬೆಲೆ ಇಳಿಕೆ, ‘ಅಡುಗೆ ಎಣ್ಣೆ’ ಈಗ ಅಗ್ಗ
ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ? : ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್
‘ಚಿಲುಮೆ’ ಮೊಬೈಲ್ ಆ್ಯಪ್ ಡೆವಲಪರ್ ಪೊಲೀಸ್ ವಶಕ್ಕೆ ; ತೀವ್ರ ವಿಚಾರಣೆ |Voter ID Scam