ಯಾದಗಿರಿ : ಜಿಲ್ಲೆಯಾದ್ಯಂತ ಚಳಿ ಹೆಚ್ಚಾಗಿದ್ದು ಜನರು ಮನೆಯಿಂದ ಹೊರ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಿಂದ ಚಳಿ ಹೆಚ್ಚಾಗಿದ್ದು ಜನರು ಗಡಗಡ ನಡುವಂತಾಗಿದೆ.
ಜಿಲ್ಲೆಯ ಶಹಾಪುರ, ಸುರಪುರ, ವಡಗೇರಾ, ಗುರುಮಠಕಲ್, ಹುಣಸಗಿ ಸುತ್ತಮುತ್ತ ಹವಮಾನದಲ್ಲಿ ವೈಪರಿತ್ಯ ಕಂಡು ಬಂದಿದ್ದು, ಮಂಜು ಮುಸುಕಿದ ವಾತಾವರಣ ನಿರ್ಮಾಣಗೊಂಡಿದೆ.
ಜಿಲ್ಲೆಯ ತಾಪಮಾನವೂ 21 ಡಿಗ್ರಿ ಸೆಲ್ಸಿಯಸ್ಗೆ ಇಳಿಮುಖ ಆಗಿರುವುದು ವರದಿಯಾಗಿದೆ. ಚಳಿಯಿಂದಾಗಿ ಬೆಳಗಿನ ವಾಯುವಿಹಾರಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಕೊರೆಯುವ ಚಳಿಗೆ ಟೋಪಿ ಜಾಕೆಟ್ ಸ್ವೇಟರ್ ಧರಿಸಿಕೊಂಡೆ ಹೊರ ಬರುವಂತಹ ದೃಶ್ಯಗಳು ಎದುರಾಗುತ್ತಿದೆ.