ಬೆಂಗಳೂರು: ನ.20ರ ಭಾನುವಾರದಂದು ಬೆಂಗಳೂರಿನ ಆಹಾರ -ಆರೋಗ್ಯ ಪ್ರಿಯರ ಪಾಲಿಗೆ ವಿಶಿಷ್ಟ ದಿನವಾಗಲಿದೆ. ಸಾವಯವ ಕೃಷಿ-ಆಹಾರಗಳ ಬಗ್ಗೆ ಜನ ಜಾಗೃತಿ ಸೃಷ್ಟಿಯಾಗುತ್ತಿರುವ ಈ ದಿನಗಳಲ್ಲಿ ಭಾನುವಾರ ಅಪರಾಹ್ನ ಯಲಹಂಕದ ಆರ್ ಎಂ ಝೆಡ್ ಗಲೇರಿಯದಲ್ಲಿ ಒಂದು ವಿಶಿಷ್ಟ ಆಹಾರ ಮೇಳ ( Food Festival )- ಪ್ರಾತ್ಯಕ್ಷಿಕೆ ನಡೆಯಲಿದೆ. ಅಳಿವಿನ ಅಂಚಿನಲ್ಲಿರುವ ಅಕ್ಕಿ ತಳಿಗಳನ್ನು ಬಳಸಿಕೊಂಡು ವಿಶೇಷ ಖಾದ್ಯಗಳನ್ನು ಖ್ಯಾತ ಬಾಣಸಿಗರು ತಯಾರಿಸಲಿದ್ದಾರೆ. ಗ್ರೀನ್ಪೀಸ್ ಇಂಡಿಯಾದಿಂದ ಕುಕ್ಕಿಂಗ್ ಅಪ್ ಚೇಂಜ್- ಅಕ್ಕಿ ತಳಿಗಳ ಮರುಶೋಧನೆ ಕಾರ್ಯಕ್ರಮದಲ್ಲಿ ಈ ವಿಶಿಷ್ಟ ಪ್ರಯೋಗ ನಡೆಯಲಿದೆ.
ವಿದ್ಯುತ್ ಬಿಲ್ ಕಟ್ಟದ ಸರ್ಕಾರಿ ಕಚೇರಿಗಳಿಗೆ BESCOM ಬಿಗ್ ಶಾಕ್: ಬಿಬಿಎಂಪಿ, BWSSBಗೆ ಬಾಕಿ ಪಾವತಿಗೆ ನೋಟಿಸ್
ಕಣ್ಮರೆಯಾಗುತ್ತಿರುವ ವೈವಿಧ್ಯಮಯ ಅಕ್ಕಿತಳಿಗಳು ಮತ್ತು ಅವುಗಳಲ್ಲಿರುವ ಪೌಷ್ಟಿಕಾಂಶಗಳ ಪರಿಚಯದ ಮೂಲಕ ಸಮುದಾಯವನ್ನು ಸಾವಯವ ಅಕ್ಕಿ ಬೆಳೆಗಳ ಸೇವನೆಯತ್ತ ಪ್ರೋತ್ಸಾಹಿಸುವುದು ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ಧೇಶ. ಜನರಲ್ಲಿ ಮರೆಯಾಗುತ್ತಿರುವ ಸಾವಯವ ದೇಸೀ ತಳಿಗಳ ಕುರಿತ ಅರಿವು ಮತ್ತು ಅವರ ಆಹಾರ ಕ್ರಮದಲ್ಲಿ ಬದಲಾವಣೆ ತರಲು ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಗ್ರೀನ್ಪೀಸ್ ಇಂಡಿಯಾ ದೇಶದ ವಿವಿಧೆಡೆ ಲಭ್ಯವಿರುವ ಅಪರೂಪದ ಅಕ್ಕಿತಳಿಗಳನ್ನು ಬಳಸಿಕೊಂಡು ವೈವಿಧ್ಯಮಯ ತಿನಿಸುಗಳನ್ನು ತಯಾರಿಸಿ ಪ್ರದರ್ಶಿಸಲಿದೆ.
ಆರೋಗ್ಯಕರ ಮತ್ತು ರಾಸಾಯನಿಕ-ಮುಕ್ತ ಆಹಾರ ಸೇವನೆ ಕುರಿತಂತೆ ಸಾರ್ವಜನಿಕರಲ್ಲಿ ಸಾಕಷ್ಟು ಉತ್ಸಾಹ ಮತ್ತು ಕಾಳಜಿ ಇದ್ದರೂ, ಈ ನಿಟ್ಟಿನಲ್ಲಿ ಸ್ಥಳೀಯ ಆಹಾರ ಪದಾರ್ಥಗಳನ್ನು ದೊಡ್ಡ ಪ್ರಮಾಣದಲ್ಲಿ ಸೂಕ್ತವಾಗಿ ಬಳಕೆ ಮಾಡಿಕೊಳ್ಳಲಾಗಿಲ್ಲ. ಇದಕ್ಕೆ ಅವುಗಳ ಅಲಭ್ಯತೆ, ಹೆಚ್ಚು ಪರಿಚಿತವಲ್ಲದ ಈ ತಳಿಗಳೆಡೆಗೆ ಆತಂಕಗಳು, ತಪ್ಪು ಮಾಹಿತಿ ಹೀಗೆ ಹಲವಾರು ಕಾರಣಗಳಿವೆ.
ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಗ್ರೀನ್ಪೀಸ್ ಇಂಡಿಯಾ ಹೆಜ್ಜೆ ಇಡುತ್ತಿದೆ. ಭಾರತದಲ್ಲಿ ಕಣ್ಮರೆಯಾಗುತ್ತಿರುವ ಅಕ್ಕಿ ತಳಿಗಳನ್ನು ಶೋಧಿಸಿ, ಜನರಿಗೆ ಪರಿಚಯಿಸಿ, ಅದನ್ನು ಬಳಸುವಂತೆ ಪ್ರೇರೇಪಿಸುವ ಸಲುವಾಗಿ ಈ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ʻಕುಕ್ಕಿಂಗ್ ಅಪ್ ಚೇಂಜ್ʼ ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಭಾರತದಲ್ಲಿನ ಅಪರೂಪದ ಅಕ್ಕಿ ತಳಿಗಳ ವಿವಿಧ ಬಗೆಯ ಆಹಾರಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲಿದೆ. ಈ ದೇಸೀ ಅಕ್ಕಿ ತಳಿಗಳಿಂದ ಅನ್ನ ತಯಾರಿಸುವುದು ಹೇಗೆ ಎಂಬುದರಿಂದ ಮೊದಲುಗೊಂಡು, ವಿವಿಧ ರುಚಿಕರ ತಿನಿಸುಗಳನ್ನು ಮಾಡುವುದು ಹೇಗೆ ಎಂಬುದನ್ನೂ ಗ್ರೀನ್ಪೀಸ್ ತಂಡ ತಮ್ಮ ನಳಪಾಕದಲ್ಲಿ ತೋರಿಸಲಿದೆ. ಕಾಯಕ್ರಮದಲ್ಲಿ ಭಾಗವಹಿಸುವ ಆಸಕ್ತರಿಗೂ ತಮ್ಮ ಹೊಸ ಕೈರುಚಿಯ ಪ್ರಯೋಗ ಮಾಡಲು ಇಲ್ಲಿ ಅವಕಾಶವಿದೆ. ಈ ಕಾರ್ಯಕ್ರಮದಲ್ಲಿ ನಿಜಾವರ, ಗಂಧಕಶಾಲ, ವಲಿಯಚೆನ್ನೆಲ್ಲು, ಮುಲ್ಲಂಕೈಮ ಮತ್ತು ಇತರೆ ಅಳಿವಿನಂಚಿನಲ್ಲಿರುವ ಅಪರೂಪದ ಅಕ್ಕಿಯ ತಳಿಗಳನ್ನು ಪರಿಚಯಿಸಲಾಗುತ್ತದೆ.
ಹವಾಮಾನ ಬದಲಾವಣೆ ಮತ್ತು ಇದರಿಂದ ಉಂಟಾಗಿರುವ ತಾಪಮಾನ ಏರಿಕೆ, ಮಳೆ ಬೀಳುವಿಕೆಯಲ್ಲಿನ ವ್ಯತ್ಯಾಸ ಮತ್ತು ಹೆಚ್ಚಿರುವ ಹಮಾಮಾನ ವೈಪರೀತ್ಯದಂತಹ ಘಟನೆಗಳು, ಹೆಚ್ಚಿನ ಜನರನ್ನು ಬಡತನಕ್ಕೆ ತಳ್ಳಿದೆ ಮತ್ತು ಆಹಾರ ಭದ್ರತೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ನಮ್ಮ ಪ್ರಸ್ತುತ ಆಹಾರ ವ್ಯವಸ್ಥೆಯಲ್ಲಿರುವ ಬಹುಪಾಲು ಆಹಾರ ಬೆಳೆಗಳು ಪರಿಸರ ಆಹಾರ ಬೆಳೆಗಳಲ್ಲ.
ಬೆಂಗಳೂರು ಮೆಟ್ರೋ ರೈಲು ಯೋಜನೆ ಜೂನ್ 2025 ರೊಳಗೆ 175 ಕಿ.ಮೀ ಟ್ರ್ಯಾಕ್ ಪೂರ್ಣ – BMRC ಎಂಡಿ
ನಮ್ಮ ಆಹಾರ, ಪೋಷಣೆ, ನಮ್ಮ ಆರೋಗ್ಯ (ರೈತರು ಮತ್ತು ಗ್ರಾಹಕರು) ಮತ್ತು ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರುವುದರೊಂದಿಗೆ 34% ಮಾನವಜನ್ಯ ಹಸಿರುಮನೆ ಪರಿಣಾಮಕ್ಕೆ (ಗ್ರೀನ್ ಹೌಸ್ ಗ್ಯಾಸ್ ಹೊರಸೂಸುವಿಕೆಗೆ) ಕಾರಣವಾಗಿದೆ. ಇದರೊಂದಿಗೆ ಸರ್ಕಾರ ಮತ್ತು ಕಾರ್ಪೋರೇಟ್ ಕಂಪನಿಗಳು ಈ ಬಿಕ್ಕಟ್ಟಿಗೆ ಏಕರೂಪದ ಬೆಳೆ, ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳುವ, ಕ್ಲೈಮೇಟ್ ಸ್ಮಾರ್ಟ್ ಅಗ್ರಿಕಲ್ಚರ್ ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆಗೆ ಹೆಚ್ಚುವರಿ ಪೋಷಕಾಂಶಗಳನ್ನು ಸೇರಿಸಿದ ಆಹಾರ (ಕಡ್ಡಾಯ ಫೋರ್ಟಿಫಿಕೇಶನ್)ಗಳೆಂಬ ಹುಸಿ ಪರ್ಯಾಯ ಪರಿಹಾರಗಳನ್ನು ಸೂಚಿಸುತ್ತಿವೆ. ಆಹಾರಕ್ರಮದ ಆಯ್ಕೆಗಳನ್ನು ಉತ್ತಮ ಪರ್ಯಾಯವಾಗಿ ಮಾತ್ರವಲ್ಲದೆ ಹವಾಮಾನ ಬದಲಾವಣೆಯ ಹೊಂದಾಣಿಕೆಗೆ ಪರಿಹಾರವಾಗಿಯೂ ಯೋಜಿಸುವುದು ಅತ್ಯಗತ್ಯ, ಅದು ಇಂದಿನ ತುರ್ತು.
ಸ್ವಾವಲಂಬಿ ಗ್ರಾಹಕ ಸಮೂಹ: ಈ ಕಾರ್ಯಕ್ರಮದ ಮೂಲಕ, ಗ್ರೀನ್ಪೀಸ್ ಇಂಡಿಯಾವು ಸ್ವಾವಲಂಬಿ ಗ್ರಾಹಕ ಸಮೂಹಗಳನ್ನು ರಚಿಸುವ ಮತ್ತು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಗ್ರಾಹಕ ಸಮೂಹಗಳು ರೈತರಿಂದ ನೇರವಾಗಿ ಸ್ಥಳೀಯ ಭತ್ತದ ತಳಿಗಳನ್ನು ಪಡೆಯುತ್ತದೆ ಮತ್ತು ಆ ಮೂಲಕ ಪರಿಸರ ಸ್ನೇಹಿ ಆಹಾರ ವ್ಯವಸ್ಥೆಯ ಸರಪಳಿಯನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ರೈತರು, ಸಾರ್ವಜನಿಕರೂ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಕಾರ್ಯಕ್ರದಲ್ಲಿನ ಚಟುವಟಿಕೆಗಳು ಈ ಕೆಳಗಿನಂತಿವೆ. ದೇಶೀಯ ಅಕ್ಕಿಯ ತಳಿಗಳಿಂದ ಅನ್ನವನ್ನು ತಯಾರಿಸುವುದರ ಕುರಿತು ಪ್ರಾತ್ಯಕ್ಷಿಕೆ, ಸಂಪೂರ್ಣ ಸಾವಯವ ಮಯ ಫುಡ್ ಪಾಪ್-ಅಪ್ ಮತ್ತು ರುಚಿಕರವಾದ ಭಕ್ಷ್ಯಗಳ ತಯಾರಿ, ರೈತರಿಂದ ಸಾವಯವ ಭತ್ತದ ತಳಿಗಳ ಪ್ರದರ್ಶನ ಮತ್ತು ಮಾರಾಟ