ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಜಾರಿಗೊಳಿಸಿರುವಂತ ಮಹತ್ವದ ಯೋಜನೆಯಲ್ಲಿ ಒಂದು ಪುಣ್ಯಕೋಟಿ ದತ್ತು ಯೋಜನೆಯಾಗಿದೆ. ಈ ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ಸರ್ಕಾರಿ ನೌಕರರ ( Karnataka Government Employees ) ವೇತನದಿಂದ ವಂತಿಗೆಯನ್ನು ಕಟಾವು ಮಾಡೋದಕ್ಕೆ ಆದೇಶಿಸಲಾಗಿದೆ.
ಈ ಸಂಬಂಧ ಆರ್ಥಿಕ ಇಲಾಖೆಯ ( Finance Department ) ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿರುವಂತ ಪ್ರತಿಯು ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಸರ್ಕಾರ ಹೊರಡಿಸಿರುವಂತ ನಡವಳಿಯಲ್ಲಿ ಪುಣ್ಯಕೋಟಿ ದತ್ತು ಯೋಜನೆಯ ( Punyakoti Adoption Scheme ) ಸುಗಮ ಅನುಷ್ಠಾನಕ್ಕಾಗಿ ವಿವಿಧ ವೃಂದದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರ ನವೆಂಬರ್ 2022ರ ತಿಂಗಳ ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ವೇತನ ಕಟಾವು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಸಮಾವೇಶ: ಎಲೆಕ್ಟ್ರಾನಿಕ್ ವಲಯದಲ್ಲಿ 36 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ
ಅಂದಹಾಗೇ ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಎ ವೃಂದದ ಅಧಿಕಾರಿಗಳ ವೇತನದಿಂದ ರೂ.11,000, ಬಿ-ವೃಂದದ ಅಧಿಕಾರಿಗಳಿಂದ ರೂ.4,000, ಸಿ-ವೃಂದದ ನೌಕರರಿಂದ ರೂ.400 ಕಟಾವು ಮಾಡಲು ನಿರ್ಧರಿಸಿದೆ. ಆದ್ರೇ ಡಿ-ವೃಂದದ ನೌಕರರ ವೇತನದಿಂದ ಪುಣ್ಯಕೋಟಿ ದತ್ತು ಯೋಜನೆಗೆ ವೇತನ ಕಡಿತಗೊಳಿಸೋದರಿಂದ ವಿನಾಯ್ತಿಯನ್ನು ನೀಡಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ
ಮೊದಲ ಬಾರಿಗೆ ‘ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ’ಗೆ ‘ರೋಬೊಟಿಕ್ ತಂತ್ರಜ್ಞಾನ’ ಪರಿಚಯಿಸಿದ ‘ಫೋರ್ಟಿಸ್ ಆಸ್ಪತ್ರೆ’