ಮಂಡ್ಯ : ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಇಬ್ಬರು ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗದೆ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿ ಅವರ ವಿರುದ್ಧ ನನ್ನ ವಿರುದ್ಧ ನಾನು ಗೆಲ್ಲದೆ ಹೋದರೆ ಶಿರಚ್ಛೇದನ ಮಾಡಿಕೊಳ್ಳುವುದಾಗಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ( Farmer MP LR Shivaramegowdha ) ಸವಾಲು ಹಾಕಿದರು.
ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಹೋಬಳಿಯ ಕೆ.ಮಲ್ಲಿಗೆರೆ, ಬೋಳಾರೆ, ತರಮನಕಟ್ಟೆ, ಜೋಗಿ ಕೊಪ್ಪಲು, ಗಟ್ಟಹಳ್ಳಿ, ಕೌಡ್ಲೆ ಹಾಗೂ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಜನ ಸಂಪರ್ಕ ಸಭೆ ನಡೆಸಿ ಮಾತನಾಡಿ, ಈ ಹಿಂದೆ ಮಂಡ್ಯ ಜಿಲ್ಲೆ, ಜೆಡಿಎಸ್ ಭದ್ರಕೋಟೆ ಆಗಿತ್ತು ನಿಜ. ಆದರೆ ಜಿಲ್ಲೆಯ ಕೆಲ ಭಟ್ಟಂಗಿಗಳ ದುರ್ವರ್ತನೆಯಿಂದ ಜೆಡಿಎಸ್ ಭದ್ರಕೋಟೆ ಸ್ವಲ್ಪ ಸ್ವಲ್ಪ ಕುಸಿಯುತ್ತಿದೆ. ನನಗೆ ಮಾಜಿ ಪ್ರಧಾನಿ ದೇವೇಗೌಡ್ರು, ಮಾಜಿ ಸಿಎಂ ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಅವರುಗಳ ಬಗ್ಗೆ ಗೌರವ ಇದೆ. ಅವರ ಬಗ್ಗೆ ನಾನು ಹಗರುವಾಗಿ ಮಾತನಾಡುವುದಿಲ್ಲ ಎಂದರು.
BREAKING: ‘ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ’ದ ಅಧ್ಯಕ್ಷರನ್ನಾಗಿ ‘ಶಾಸಕ ಗೂಳಿಹಟ್ಟಿ ಶೇಖರ್’ ನೇಮಕ
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಸುರೇಶ್ ಗೌಡ ಅವರಿಗೆ ಜೆಡಿಎಸ್ ನಿಂದ ಟಿಕೆಟ್ ನೀಡಿದರೇ ಸೋಲು ಕಟ್ಟಿಟ್ಟ ಬುತ್ತಿ, ಆಗಾಗಿ ಜೆಡಿಎಸ್ ಪಕ್ಷ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೇ ಮಾತ್ರ ಗೆಲುವು ಖಚಿತ ಎಂದು ಭವಿಷ್ಯ ನುಡಿದರು.
ನಾಗಮಂಗಲ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದೆ. ಕ್ಷೇತ್ರದಲ್ಲಿ ನಾಲ್ಕೈದು ರಿಂಗ್ ಮಾಸ್ಟರ್ ಗಳ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದರಿಂದ ಕ್ಷೇತ್ರದ ಜನರು ಬೇಸರಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಈಗಾಗಲೇ ಬಿಜೆಪಿ ಪಕ್ಷ ನನಗೆ ಟಿಕೆಟ್ ನೀಡಲು ಸಿದ್ದವಿದೆ. ಆದರೆ ಬಿಜೆಪಿ ಪಕ್ಷಕ್ಕೆ ಜಿಲ್ಲೆಯಲ್ಲಿ ನೆಲೆ ಇಲ್ಲದಿರುವ ಕಾರಣ ಟಿಕೆಟ್ ನಿರಾಕರಿಸಿದ್ದೇನೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ ಟಿಕೆಟ್ ನೀಡುವ ಭರವಸೆ ಇದೆ. ಆದರೆ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮುಖಂಡರಾದ ಮಂಜೇಗೌಡ, ಚೇತನ್ ಗೌಡ, ರಮೇಶ್, ಹರೀಶ್, ಪುಟ್ಟಸ್ವಾಮಿ, ರಮೇಶ್ ಭಟ್ರು, ನಾಗರಾಜ್, ಮಧು, ಕೃಷ್ಣೇಗೌಡ ಸೇರಿದಂತೆ ಮತ್ತಿತರರು ಇದ್ದರು.