ಚಿತ್ರದುರ್ಗ: ಮುರುಘಾ ಮಠದ ಶ್ರೀಗಳು ( Murugha Sri ) ಪೋಕ್ಸೋ ಕೇಸ್ ನಲ್ಲಿ ( POSCO Case ) ಜೈಲುಪಾಲು ಆಗಿದ್ದಾರೆ. ಅವರ ವಿರುದ್ಧ ದಾಖಲಾಗಿರುವಂತ ಮೊದಲ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬಳಿಕ ಎರಡನೇ ಪೋಕ್ಸೋ ಕೇಸ್ ಕೂಡ ಶ್ರೀಗಳ ವಿರುದ್ಧ ದಾಖಲಾಗಿದೆ. ಈ ಬೆನ್ನಲ್ಲೇ ಮುರುಘಾ ಶ್ರೀಗಳ ಮತ್ತೊಂದು ಕರಾಳ ಮುಖವನ್ನು ಶ್ರೀಗಳ ಸಹಾಯಕ ಬಿಚ್ಚಿಟ್ಟಿರೋದು ಚಾರ್ಜ್ ಶೀಟ್ ಮೂಲಕ ಹೊರ ಬಿದ್ದಿದೆ.
ಮುರುಘಾ ಶ್ರೀ ವಿರುದ್ಧ ದಾಖಲಾಗಿರುವಂತ ಪೋಕ್ಸೋ ಪ್ರಕರಣ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಚಾರ್ಜ್ ಶೀಟ್ ನಲ್ಲಿನ ವಿಚಾರಗಳು ಒಂದೊಂದೇ ಹೊರ ಬರುತ್ತಿದ್ದು, ಶ್ರೀಗಳ ಮೃಗೀಯ ವರ್ತನೆಗಳೇ ಲೀಲಾ ಜಾಲವಾಗಿ ಹೊರ ಬೀಳುತ್ತಿವೆ ಎನ್ನಲಾಗಿದೆ.
ಇದೀಗ ಶ್ರೀಗಳ ಸಹಾಯಕ ಮಹಾಲಿಂಗ ಎಂಬುವರು ಪೊಲೀಸರ ಮುಂದೆ ಬಾಯ್ ಬಿಟ್ಟಂತ ಸ್ಪೋಟಕ ಸತ್ಯಗಳೂ ಸಹಿತ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ ಎನ್ನಲಾಗುತ್ತಿದೆ. ಮುರುಘಾ ಶ್ರೀಗಳ ಬೆಡ್ ಶೀಟ್ ಮೇಲೆ ಕೆಲವೊಮ್ಮೆ ಕಲೆಗಳು ಇರುತ್ತಿದ್ದವು ಎಂಬ ಮತ್ತೋಂದು ಸ್ಪೋಟಕ ಮಾಹಿತಿ ತಿಳಿದು ಬಂದಿದೆ.
ಇನ್ನೂ ಶ್ರೀಗಳ ಬೆಡ್ ಶೀಟ್ ಮೇಲೆ ಇರುತ್ತಿದ್ದಂತ ಕಲೆಗಳನ್ನು ಸ್ವಚ್ಛವಾಗಿ ತೊಳೆಯುವಂತೆ ಸಹಾಯಕ ಮಹಾಲಿಂಗ ಅವರಿಗೆ ಮುರುಘಾ ಶ್ರೀ ಹೇಳುತ್ತಿದ್ದರಂತೆ. ಹಗಲಿನಲ್ಲಿ ಲೇಡಿ ವಾರ್ಡನ್ ಮಕ್ಕಳೊಂದಿಗೆ ಬರುತ್ತಿದ್ದರೇ, ರಾತ್ರಿಯಲ್ಲಿ ಬಾಲಕಿಯರು ಹಿಂಬಾಗಿಲಿನಿಂದ ಬರುತ್ತಿದ್ದ ಮಾಹಿತಿಯನ್ನು ಖಾಕಿ ಮುಂದೆ ಶ್ರೀಗಳ ಸಹಾಯಕ ಬಿಚ್ಚಿಟ್ಟಿರುವುದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.