ಬೆಂಗಳೂರು: ನಿನ್ನೆ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಗುಸುಗುಸು, ಪಿಸು ಪಿಸು ಮಾತಿನಲ್ಲಿ ವ್ಯಂಗ್ಯವಾಗಿ ಮಾತನಾಡಿದ್ದರು ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಅವರನ್ನು ಕುರುಬ ಸಮುದಾಯದ ಮುಖಂಡ ಹಾಗೂ ಕಾಂಗ್ರೆಸ್ ನಾಯಕ ಕೆ.ಮುಕುಡಪ್ಪ ( Congress Leader K Mukudappa ) ಕ್ಷಮೆಯಾಚಿಸಿದ್ದಾರೆ.
ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಕುರುಬ ಸಮುದಾಯದ ಮುಖಂಡ ಹಾಗೂ ಕಾಂಗ್ರೆಸ್ ನಾಯಕ ಕೆ.ಮುಕುಡಪ್ಪ ಅವರು ಸುದ್ಧಿಗೋಷ್ಠಿಯ ವೇಳೆಯಲ್ಲಿಯೇ ಗುಸು ಗುಸು ಮಾತಿನಲ್ಲಿ ಪುಟ್ಟಸ್ವಾಮಿಯೊಂದಿಗೆ ಮಾತನಾಡಿದ್ದರು. ಈ ಮೂಲಕ ಸಿದ್ಧು ವಿರುದ್ಧವೇ ವ್ಯಂಗ್ಯವಾಡಿದ್ದರು ಎನ್ನಲಾಗಿತ್ತು.
ಈ ಸಂಬಂಧ ಪ್ರತಿಕ್ರಿಯಿಸಿರುವಂತ ಕುರುಬ ಸಮುದಾಯದ ಮುಖಂಡ ಕೆ.ಮುಕುಡಪ್ಪ ಅವರು, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೇ ಕ್ಷಮೆ ಕೇಳುವೆ ಎಂದು ತಿಳಿಸಿದ್ದಾರೆ.
BREAKING NEWS: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಬಂಧಿತ ಆರೋಪಿ ಅಮೃತ್ ಪೌಲ್ ನಿವಾಸದ ಮೇಲೆ ಇಡಿ ದಾಳಿ
ಸಿದ್ಧರಾಮಯ್ಯ ಕುರುಬ ಸಂಘ ಹಾಗೂ ಮಠ ಕಟ್ಟಿದ್ದಾರೆ. ಕುರುಬ ಸಮುದಾಯಕ್ಕೆ ಸಿದ್ಧರಾಮಯ್ಯ ಕೊಡುಗೆ ನೀಡಿದ್ದಾರೆ. ನಾನು ಪುಟ್ಟಸ್ವಾಮಿ ಕುರಿ ಹಾಗೂ ಟಗರು ಬಗ್ಗೆ ಮಾತನಾಡಿದ್ದೆವು. ಸಿಎಂ 20 ಕುರಿ, ಟಗರು ನೀಡುವ ಯೋಜನೆ ಬಗ್ಗೆ ಚರ್ಚಿಸಿದ್ದೆವು. ಈ ವೇಳೆ ಒಂದು ಟಗರು 20 ಕುರಿ ನೋಡಿಕೊಳ್ಳುತ್ತದೆ ಅಂದಿದ್ದೆ. ಆದ್ರೇ ಇದನ್ನು ಸಿದ್ಧರಾಮಯ್ಯ ಬಗ್ಗೆ ಆ ಪದ ಹೇಳಿದ್ದೇನೆ ಎಂಬುದಾಗಿ ಬಿಂಬಿಸಲಾಗಿತ್ತು. ಇದರಿಂದ ನೋವಾಗಿದ್ದರೇ ಕ್ಷಮೆ ಕೇಳುವೆ ಎಂದು ಕ್ಷಮೆಯಾಚಿಸಿದ್ದಾರೆ.