ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಣ್ಣ ಪ್ರಯಾಣಿಕ ವಿಮಾನವೊಂದು ತಾಂಜೇನಿಯಾದ ವಿಮಾನ ನಿಲ್ದಾಣವನ್ನ ಸಮೀಪಿಸುತ್ತಿದ್ದಾಗ ವಿಕ್ಟೋರಿಯಾ ಸರೋವರದಲ್ಲಿ ಪತನವಾಯ್ತು. ದುರಂತಕ್ಕೀಡಾದ ವಿಮಾನ ಕನಿಷ್ಠ 43 ಜನರನ್ನ ಹೊತ್ತಿತ್ತು ಎಂದು ಹೇಳಲಾಗ್ತಿದ್ದು ಈ ಪೈಕಿ 19 ಜನರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತಾಂಜೇನಿಯಾ ಮಾಧ್ಯಮ ವರದಿಗಳ ಪ್ರಕಾರ, ವಿಮಾನದಲ್ಲಿ 43 ಪ್ರಯಾಣಿಕರಿದ್ದರು. ಅದೇ ಸಮಯದಲ್ಲಿ, ಈ ಅಪಘಾತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅದ್ರಲ್ಲಿ ಇಬ್ಬರೂ ವಿಮಾನದ ಪೈಲಟ್ ಸೇರಿರಬೋದು. ಇನ್ನು ಸರೋವರಕ್ಕೆ ಬಿದ್ದ 26 ಜನರನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ.
#UPDATE | Death toll jumps to 19 in Tanzania plane crash where a plane carrying dozens of passengers plunged into Lake Victoria in Tanzania on Sunday as it approached the northwestern city of Bukoba, reports AFP News Agency citing Tanzanian PM
— ANI (@ANI) November 6, 2022
“ನಾವು ಹೆಚ್ಚಿನ ಸಂಖ್ಯೆಯ ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಕಾಗೆರಾ ಪ್ರಾಂತ್ಯದ ಪೊಲೀಸ್ ಕಮಾಂಡರ್ ವಿಲಿಯಂ ಮ್ವಂಪಾಗ್ಲೆ ಹೇಳಿದ್ದಾರೆ. ವಿಮಾನವು ಸುಮಾರು 100 ಮೀಟರ್ (328 ಅಡಿ) ಎತ್ತರದಲ್ಲಿದ್ದಾಗ, ಪ್ರತಿಕೂಲ ಹವಾಮಾನದಿಂದಾಗಿ ಅದು ಸಮಸ್ಯೆ ಎದುರಿಸಿತು ಎಂದು ಅವರು ವಿವರಿಸಿದರು. ಇನ್ನು ಮಳೆಯ ನಡುವೆ ವಿಮಾನವು ನೀರಿಗೆ ಬಿದ್ದಿದ್ದು, ಈಗ ಎಲ್ಲವೂ ನಿಯಂತ್ರಣದಲ್ಲಿದೆ. ಆದಾಗ್ಯೂ, ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ.
50 ದಿನದ ನಂತ್ರ ದೊಡ್ಡ ಆವರಣಕ್ಕೆ 2 ಚೀತಾ ಸ್ಥಳಾಂತರ ; “Great News” ಅಂತಾ ಖುಷಿ ವ್ಯಕ್ತಪಡಿಸಿದ ‘ಪ್ರಧಾನಿ ಮೋದಿ’
ಡಿ ಕೆ ಶಿವಕುಮಾರ್ಗೆ ಮತ್ತೊಂದು ಆಘಾತ: ಸೋಲಾರ್ ಪರವಾನಗಿ ಅವ್ಯವಹಾರದ ಬಗ್ಗೆ ತನಿಖೆಗೆ ಮುಂದಾದ ರಾಜ್ಯ ಸರ್ಕಾರ
ಮಹಿಳಾಮಣಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ರೈಲ್ವೇ ಮಹತ್ವದ ಘೋಷಣೆ, ಟ್ರೈನ್’ನಲ್ಲಿ ‘ಖಚಿತ ಆಸನ’ ಸೌಲಭ್ಯ