ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜೂನಿಯರ್ ಎನ್ ಟಿ ಆರ್ ಅವರು ಕರ್ನಾಟಕ ರತ್ನ ಅರ್ಥವೇ ಪುನೀತ್ ರಾಜ್ ಕುಮಾರ್ ಎಂಬುದಾಗಿ ಹೇಳಿದರು.
ಇಂದಿನ ಪುನೀತ್ ರಾಜ್ ಕುಮಾರ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದಂತ ಟಾಲಿವುಟ್ ನಟ ಜೂನಿಯರ್ ಎನ್ ಟಿ ಆರ್ ಅವರು, ನಾನು ನನ್ನ ಸಾಧನೆಯಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ಬದಲಾಗಿ ಅಪ್ಪು ಗೆಳೆಯನಾಗಿ ಬಂದಿದ್ದೇನೆ ಎಂದರು.
ಅವರ ನಗುವಿನಲ್ಲಿ ಇದ್ದಂತ ಶ್ರೀಮಂತಿಕೆ ನಾನು ಎಲ್ಲಿಯೂ ನೋಡಲಿಲ್ಲ. ಅದಕ್ಕೆ ಅವರನ್ನು ನಗುವಿನ ಒಡೆಯ ಎನ್ನುವುದು. ನನಗೆ ಒಂದು ಅನಿಸುತ್ತಿದೆ ಇವತ್ತು ಪುನೀತ್ ರಾಜ್ ಕುಮಾರ್ ಅವರಿಗೆ ನೀಡುತ್ತಿರುವಂತ ಕರ್ನಾಟಕ ರತ್ನ ಪ್ರಶಸ್ತಿ ಕೇವಲ ಕರ್ನಾಟಕ ರತ್ನ ಪ್ರಶಸ್ತಿಯಲ್ಲ. ಅದು ಕರ್ನಾಟಕ ರತ್ನವೇ ಪುನೀತ್ ರಾಜ್ ಕುಮಾರ್ ಅರ್ಥವಾಗಿದೆ. ಇದೊಂದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂಬುದಾಗಿ ಕನ್ನಡದಲ್ಲಿಯೇ ಮಾತನಾಡಿ ನಟ ಜೂನಿಯರ್ ಎನ್ ಟಿ ಆರ್ ಶುಭಾಶಯ ಕೋರಿದರು.