ಚಿತ್ರದುರ್ಗ: ಮುರುಘಾ ಶ್ರೀಗಳ ( Murugha Sri ) ವಿರುದ್ಧ ಪೋಕ್ಸೋ ಕೇಸ್ ( POSCO Case ) ದಾಖಲಾದ ನಂತ್ರ, ಶ್ರೀಗಳು ಜೈಲು ಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಎ.1 ಆರೋಪಿಯನ್ನಾಗಿ ಮುರುಘಾ ಶ್ರೀಗಳನ್ನು ಮಾಡಲಾಗಿದೆ. ಇಂತಹ ಪ್ರಕರಣ ಸಂಬಂಧ ಇಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಶೈಕ್ಷಣಿಕ ಸಾಲ ಯೋಜನೆಯಡಿ ಅರ್ಜಿ ಆಹ್ವಾನ
ಇಂದು ಚಿತ್ರದುರ್ಗ ಪೊಲೀಸರು ಜಿಲ್ಲಾ 2ನೇ ಸೆಷನ್ ಕೋರ್ಟ್ ಗೆ ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಕೇಸ್ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವಂತ ಚಾರ್ಜ್ ಶೀಟ್ ನಲ್ಲಿ ಎ.1 ಮುರುಘಾ ಶ್ರೀಗಳ ವಿರುದ್ಧ ಬರೋಬ್ಬರಿ 347 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿರೋದಾಗಿ ತಿಳಇದು ಬಂದಿದೆ.
SC, ST ವಿದ್ಯಾರ್ಥಿಗಳೇ ಗಮನಕ್ಕೆ: ವಾರ್ತಾ ಇಲಾಖೆಯಿಂದ ಅಪ್ರೆಂಟಿಸ್ ಶಿಪ್ ತರಬೇತಿಗೆ ಅರ್ಜಿ ಆಹ್ವಾನ
ಅಂದಹಾಗೇ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಮುರುಘಾ ಶ್ರೀಗಳು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬುದಾಗಿ ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣದ ಅಡಿಯಲ್ಲಿ ದೂರು ದಾಖಲಾಗಿ, ಜೈಲು ಪಾಲು ಕೂಡ ಆಗಿದ್ದಾರೆ.
ಮತ್ತೊಂದೆಡೆ ಮತ್ತಿಬ್ಬರು ಬಾಲಕಿಯರು ಕೂಡ ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿಯೂ ಶ್ರೀಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಲಕಿಯರ ಹೇಳಿಕೆಯನ್ನು ಕೂಡ ಪೊಲೀಸರು ಪಡೆದಿದ್ದಾರೆ. ಈ ಕೇಸ್ ಕೂಡ ಶ್ರೀಗಳಿಗೆ ಮತ್ತೆ ಉರುಳಾಗಲಿದೆ ಎನ್ನಲಾಗಿದೆ.
BIG NEWS: ನಾಳೆ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮ: ರಾಜ್ಯ ಸರ್ಕಾರದಿಂದ ‘ಸರ್ಕಾರಿ ನೌಕರ’ರಿಗೆ ಮಹತ್ವದ ಸೂಚನೆ