ಶಿವಮೊಗ್ಗ : 2022-23 ನೇ ಸಾಲಿಗೆ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ವೃತ್ತಿಪರ/ತಾಂತ್ರಿಕ/ಉನ್ನತ ವ್ಯಾಸಂಗ ಕೋರ್ಸ್ಗಳ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ಮಂಜೂರಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
BREAKING NEWS: ನವೆಂಬರ್ 1 ರಂದು ನಟ ಪುನೀತ್ ರಾಜ್ಕುಮಾರ್ಗೆ ಮರೋಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ
ಗರಿಷ್ಟ 1.00 ಲಕ್ಷಗಳಂತೆ ಅಥವಾ ವ್ಯಾಸಂಗದ ವಾಸ್ತವಿಕ ವೆಚ್ಚದ ಮಿತಿಗೆ ಒಳಪಟ್ಟು ವೃತ್ತಿಪರ/ತಾಂತ್ರಿಕ/ಉನ್ನತ ವ್ಯಾಸಂಗದ ಕೋರ್ಸ್ನ ಅವಧಿ ಅನುಸಾರ ಗರಿಷ್ಟ ರೂ.4.00 ಲಕ್ಷಗಳಿಗಿಂತ ರೂ.5.00 ಲಕ್ಷಗಳವರೆಗೆ ವಾರ್ಷಿಕ ಶೇ.2 ರ ಬಡ್ಡಿದರದಲ್ಲಿ ಸಾಲ ಮಂಜೂರತಿ ಮಾಡಲಾಗುವುದು.
BIG NEWS: ರಾಜ್ಯಾಧ್ಯಂತ ಕಾಂಗ್ರೆಸ್ ನಾಯಕರ ‘ಬಸ್ ಯಾತ್ರೆ’ಗೆ ಹೈಕಮಾಂಡ್ ಗ್ರೀನ್ ಸಿಗ್ನಲ್: ಶೀಘ್ರವೇ ದಿನಾಂಕ ಘೋಷಣೆ
ಸಾಲ ಪಡೆಯಬಯಸುವ ವಿದ್ಯಾರ್ಥಿ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನವು ರೂ.3.50 ಲಕ್ಷ ಮೀರಿರಬಾರದು. ವಿದ್ಯಾರ್ಥಿಯು ಸರ್ಕಾಇ ಕಾಲೇಜು/ಮಾನ್ಯತೆ ಪಡೆದ ಅನುದಾನಿತ ಅಥವಾ ಅನುದಾನರಹಿತ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ/ತಾಂತ್ರಿಕ/ಉನ್ನತ ವ್ಯಾಸಂಗದ ಕೋರ್ಸ್ಗಳಲ್ಲಿ ಸಿಇಟಿ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರಬೇಕು. ವಯೋಮಿತಿ ಸ್ನಾತಕ ಕೋರ್ಸ್ಗೆ 18 ರಿಂದ 21 ವರ್ಷ ಮತ್ತು ಸ್ನಾತಕೋತ್ತರ ಪದವಿಗೆ 21 ರಿಂದ 30 ವರ್ಷದೊಳಗಿರಬೇಕು. ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
‘ಹೆಡ್ ಬುಷ್ ಚಿತ್ರ’ದಲ್ಲಿ ‘ವೀರಗಾಸೆ ಕುಣಿತ’ಕ್ಕೆ ಅಪಮಾನ ವಿಚಾರ: ‘ಸಚಿವ ಸುನೀಲ್ ಕುಮಾರ್’ ಹೇಳಿದ್ದೇನು ಗೊತ್ತಾ.?
ಈ ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಅ.18 ರಿಂದ ನವೆಂಬರ್ 30 ರೊಳಗೆ ಸಲ್ಲಿಸಬಹುದು.
BIGG NEWS ; ವಿತ್ತ ಸಚಿವೆ ನಿರ್ಮಲಾ ಮಹತ್ವದ ಘೋಷಣೆ ; ಈ ವಿಶೇಷ ‘ಸೌಲಭ್ಯ’ ಲಭ್ಯ, ಶೀಘ್ರ ‘ರೈತರ’ ಆದಾಯ ದ್ವಿಗುಣ
ಹೆಚ್ಚಿನ ಮಾಹಿತಿಗೆ ನಿಗಮದ https://kvcdc.karnataka.gov.in ವೆಬ್ಸೈಟ್ನಲ್ಲಿ ಅಥವಾ ನಿಗಮದ ದೂ.ಸಂ: 080-29904268 ಹಾಗೂ ಇಮೇಲ್ ವಿಳಾಸ mdkvcdc@gmail.com ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಭಾಗ್ಯ ನಿಲಯ, ಭಂಡಾರಿ ಗ್ಯಾಸ್ ಏಜೆನ್ಸಿ ಹತ್ತಿರ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ ದೂ.ಸಂ: 08182-229634 ನ್ನು ಸಂಪರ್ಕಿಸಬಹುದೆಂದು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮದ ಜಿಲ್ಲಾ ವ್ಯಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BIG NEWS: ‘ಟ್ರ್ಯಾಕ್ಟರ್’ನಲ್ಲಿ ಯಾತ್ರೆ, ನವೆಂಬರ್ ಒಳಗೆ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ – ಸಿದ್ಧರಾಮಯ್ಯ