ಬೆಂಗಳೂರು: ನಗರದ ಪ್ರಸಿದ್ಧ ಹೋಟೆಲ್ ಒಂದರಲ್ಲಿ ಅಗ್ನಿ ಅವಘಡ ಉಂಟಾಗಿದೆ. ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೇ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕಾರಣ, ಮುಂದಾಗಲಿದ್ದಂತ ದೊಡ್ಡ ಅನಾಹುತವೊಂದು ತಪ್ಪಿದಂತೆ ಆಗಿದೆ.
BREAKING NEWS: ಚಾಲಕನ ನಿಯಂತ್ರಣತಪ್ಪಿ ಹಳ್ಳಕ್ಕೆ ಇಳಿದ KSRTC ಬಸ್;25 ಮಂದಿ ಗಾಯ, ಆಸ್ಪತ್ರೆಗೆ ದಾಖಲು
ಬೆಂಗಳೂರಿನ ಹೃದಯ ಭಾಗದಲ್ಲಿರುವಂತ ಚರ್ಚ್ ಸ್ಟ್ರೀಟ್ ನಲ್ಲಿರುವಂತ ಪ್ರಸಿದ್ಧ ಎಂಪೈರ್ ಹೋಟೆಲ್ ನ ಕೊಠಡಿ ಸಂಖ್ಯೆ 203ರಲ್ಲಿ ಇಂದು ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.
BIGG NEWS: ಪಟಾಕಿ ತಂದ ಆಪತ್ತು; ಪಟಾಕಿ ಸಿಡಿತದಿಂದ 78 ಮಕ್ಕಳಿಗೆ ಗಾಯ
ಹೋಟೆಲ್ ರೂಂ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿಗಳು ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಆ ಬಳಿಕ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಐಫೋನ್ ಬಳಕೆದಾರರೇ ಎಚ್ಚರ ; ‘ಹೆಚ್ಚಿನ ಅಪಾಯ’ದ ಎಚ್ಚರಿಕೆ ನೀಡಿದೆ ಸರ್ಕಾರ ; ಏನು ಮಾಡ್ಬೇಕು.? ಇಲ್ಲಿದೆ ಮಾಹಿತಿ
ಎಂಫೈರ್ ಹೋಟೆಲ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವಂತ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮುಂದಾಗಲಿದ್ದಂತ ಅನಾಹುತವನ್ನು ತಪ್ಪಿಸಿದ್ದಾರೆ.
ರಾಜ್ಯ ಸರ್ಕಾರದಿಂದ ‘ಆಶಾ ಕಾರ್ಯಕರ್ತೆ’ಯರಿಗೆ ದೀಪಾವಳಿ ಗಿಫ್ಟ್: ‘1 ಸಾವಿರ ಗೌರವಧನ’ ಹೆಚ್ಚಳ, ಅನುದಾನ ಬಿಡುಗಡೆ
ಅಗ್ನಿ ಅವಘಡ ಉಂಟಾಗಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಅಲ್ಲದೇ ಯಾವುದೇ ಸಾವು ನೋವು ವರದಿಯಾಗಿಲ್ಲ.