ಉಕ್ರೇನ್: ರಾಜ್ಯದಲ್ಲಿರುವಂತ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ರಷ್ಯಾ ಹಾಗೂ ಉಕ್ರೇನ್ ಯುದ್ಧದ ಆರಂಭದ ನಂತ್ರ ವಾಪಾಸ್ ಆಗಿದ್ದರು. ಈ ಬಳಿಕ ಉಕ್ರೇನ್ ನಲ್ಲಿರುವಂತ ಭಾರತೀಯ ನಾಗರೀಕರು ಕೂಡಲೇ ಉಕ್ರೇನ್ ತೊರೆಯುವಂತೆ, ಉಕ್ರೇನ್ ನಲ್ಲಿರುವಂತ ಭಾರತೀಯ ರಾಯಭಾರ ಕಚೇರಿ ಆದೇಶಿಸಿದೆ.
ಈ ಕುರಂತೆತ ಅಕ್ಟೋಬರ್ 19 ರಂದು ರಾಯಭಾರ ಕಚೇರಿ ಹೊರಡಿಸಿದ ಸಲಹೆಯ ಮುಂದುವರಿದ ಭಾಗವಾಗಿ, ಉಕ್ರೇನ್ ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿರುವ ವಿಧಾನಗಳ ಮೂಲಕ ಉಕ್ರೇನ್ ಅನ್ನು ತಕ್ಷಣವೇ ತೊರೆಯುವಂತೆ ಸೂಚಿಸಲಾಗಿದೆ. ಕೆಲವು ಭಾರತೀಯ ಪ್ರಜೆಗಳು ಈಗಾಗಲೇ ಉಕ್ರೇನ್ ತೊರೆದಿದ್ದಾರೆ ಎಂದು ಕೀವ್ (ಉಕ್ರೇನ್) ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
In continuation of the advisory issued by the Embassy on 19th Oct, all Indian citizens in Ukraine are advised to immediately leave Ukraine by available means. Some Indian nationals have already left Ukraine pursuant to earlier advisory: Embassy of India in Kyiv (Ukraine) pic.twitter.com/DNgLPJB9pi
— ANI (@ANI) October 25, 2022