ಬಳ್ಳಾರಿ: ದೀಪಾವಳಿ ಹಿನ್ನಲೆಯಲ್ಲಿ ಸಾಲು ಸಾಲು ರಜೆಯ ಕಾರಣದಿಂದಾಗಿ ತಮ್ಮ ಊರಿಗೆ ಜನರು ಹಬ್ಬಕ್ಕೆ ತೆರಳೋದು ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವಂತ ಖಾಸಗೀ ಬಸ್ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗೆ ದುಪ್ಪಟ್ಟು ಹಣ ವಸೂಲಿ ಮಾಡಿದ್ರೇ ಬಸ್ ಪರ್ಮಿಟ್ ರದ್ದುಗೊಳಿಸಲಾಗುತ್ತದೆ ( Bus Permit Cancel ) ಎಂಬುದಾಗಿ ಸಾರಿಗೆ ಸಚಿವ ಬಿ ಶ್ರೀರಾಮುಲು (Minister B Sriramulu ) ಖಡಕ್ ಎಚ್ಚರಿಕೆ ನೀಡಿದ್ದಾರೆ.
BIGG NEWS : ರಾಜ್ಯಾದ್ಯಂತ 10,889 ಮಸೀದಿಗಳಿಗೆ ಆಜಾನ್ ಬಳಸಲು ಅನುಮತಿ ನೀಡಿದ ಸರ್ಕಾರ
ಇಂದು ಬಳ್ಳಾರಿ ನಗರದಲ್ಲಿ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರೋ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಬಸ್ ಮಾಲೀಕರ ವಿರುದ್ಧ ಕೇಸ್ ಕೂಡ ದಾಖಲಿಸಲಾಗುತ್ತದೆ. ಅಲ್ಲದೇ ಬಸ್ ಪರ್ಮಿಟ್ ರದ್ದುಗೊಳಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.
ಚಿತ್ರದುರ್ಗ ಮೂಲಕ ತುಮಕೂರು – ದಾವಣಗೆರೆ ‘ರೈಲ್ವೆ ಸಂಪರ್ಕ ಯೋಜನೆ’ ಪ್ರಾರಂಭಿಸಲು ಕ್ರಮ – ಸಿಎಂ ಬೊಮ್ಮಾಯಿ
ಈಗಾಗಲೇ ಖಾಸಗಿ ಬಸ್ ನವರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಬಗ್ಗೆ ಪರಿಶೀಲಿಸೋದಕ್ಕೆ ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಆ ಅಧಿಕಾರಿಗಳು ಖಾಸಗಿ ಬಸ್ ಗಳಲ್ಲಿ ಪ್ರಯಾಣಿಸುವಂತ ಪ್ರಯಾಣಿಕರಿಂದ ಮಾಹಿತಿ ಪಡೆಯಲಿದ್ದಾರೆ. ಹೆಚ್ಚಿನ ಹಣ ವಸೂಲಿ ಮಾಡಿದ್ರೇ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದರು.