ಹಾಸನ: ದೇಶದಲ್ಲಿ ಪಿಎಫ್ಐ ಸಂಘಟನೆಯನ್ನು ( PFI Organisation ) ನಿಷೇಧಿಸಲಾಗಿದೆ. ಹೀಗಿದ್ದೂ ನಿಷೇಧದ ಬಳಿಕವೂ ದುಷ್ಕೃತ್ಯಕ್ಕೆ ಸಂಚು ರೂಪಿಸಿರೋದನ್ನು ಪೊಲೀಸರು ಬೇಧಿಸಿದ್ದಾರೆ. ಅಲ್ಲದೇ ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜ್ಯ ‘ಆಗ್ನಿಶಾಮಕ ದಳ’ಕ್ಕೆ ಮತ್ತಷ್ಟು ಬಲ: 90 ಮೀಟರ್ ಏರಿಯಲ್ ಲ್ಯಾಡರ್ ಪ್ಲಾಟ್ ಫಾರಂ ವಾಹನ ಸಿಎಂ ಲೋಕಾರ್ಪಣೆ
ಇಂದು ಈ ಬಗ್ಗೆ ಮಾಹಿತಿ ನೀಡದಂತ ಎಡಿಜಿಪಿ ಅಲೋಕ್ ಕುಮಾರ್ ಅವರು, ದುಷ್ಕೃತ್ಯಕ್ಕೆ ಸಂಚು ರೂಪಿಸಿದಂತ ಆರೋಪದ ಮೇಲೆ ಐವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ ಪೊಲೀಸರು ಅವರು ಯಾರ ಜೊತೆಗೆ ಸಂಪರ್ಕ ಇದ್ದರು. ಅವರಿಗೆ ಎಲ್ಲಿ ತರಬೇತಿ ನೀಡಲಾಗಿತ್ತು ಎನ್ನುವ ಬಗ್ಗೆಯೂ ತನಿಖೆ ಮುಂದುವರೆದಿದೆ ಎಂದರು ಹೇಳಿದರು.
BREAKING: ಹಾಸನಾಂಭ ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಸಾವು
ಅಂದಹಾಗೇ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ ಬಳಿಕವೂ ನಾವು ಆ ಸಂಘದ ಸದಸ್ಯರು, ಮುಖಂಡರ ಚಲನವನಗಳ ಮೇಲೆ ನಿಗಾವಹಿಸಿದ್ದೇವೆ. ಮಂಗಳೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಮ್ಮ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದರು.