ಬೆಂಗಳೂರು: ರಾಜ್ಯದ ರಾಜಧಾನಿಯ ಜನತೆ ಇದೀಗ ಬಿಸಿ ಬಿಸಿ ಇಡ್ಲಿ, ಸಾಂಬಾರ್ ರುಚಿಯನ್ನು ಸವಿಯೋದಕ್ಕೆ ಹೋಟೆಲ್ ಗೆ ಹೋಗಬೇಕಾಗಿಲ್ಲ. ಬದಲಾಗಿ ದಿನದ 24 ಗಂಟೆಯೂ ಇಡ್ಲಿ, ಸಾಂಬಾರ್ ದೊರೆಯುವಂತ ಈ ಎಟಿಎಂ ಬಳಿ ತೆರಳಿದ್ರೇ ಸಾಕು. ಆ ಬಗ್ಗೆ ಮತ್ತಷ್ಟು ಮಾಹಿತಿ ಮುಂದೆ ಓದಿ.
ಬೆಂಗಳೂರಿನ ಇಡ್ಲಿ, ಸಾಂಬಾರ್ ಪ್ರಿಯರು ಬಿಸಿ ಬಿಸಿ ಇಡ್ಲಿ, ಸಾಂಬಾರ್ ಸವಿಯಲು ಈಗ ಹೋಟೆಲ್ ಗೆ ಹೋಗಬೇಕಾಗಿಲ್ಲ. ಬದಲಾಗಿ ಇಡ್ಲಿ ವೆಂಡಿಂಗ್ ಮಶೀನ್ ಬಳಿಗೆ ತೆರಳಿದ್ರೇ ಸಾಕು. ನಿಮಗೆ ದಿನದ 24 ಗಂಟೆಯೂ ಇಡ್ಲಿ, ಸಾಂಬಾರ್ ಇಲ್ಲಿ ಸಿಗಲಿದೆ.
ರಾಜ್ಯದ ಮೀನುಗಾರರಿಗೆ ಸಿಎಂ ಬೊಮ್ಮಾಯಿ ದೀಪಾವಳಿ ಗಿಫ್ಟ್: ಸಹಾಯಧನ ಯೋಜನೆ 300 ಮೀನುಗಾರರಿಂದ 1000ಕ್ಕೆ ಹೆಚ್ಚಳ
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವಂತ ಬಿಳೇಕಹಳ್ಳಿಯ ವಿಜಯ ಬ್ಯಾಂಕ್ ಲೇಔಟ್ ನ 5ನೇ ಮುಖ್ಯರಸ್ತೆಯಲ್ಲಿನ ವಿಜಯ ಕಾಂಪ್ಲೆಕ್ಸ್ ನಲ್ಲಿ ಫ್ರೆಶ್ ಹಾಟ್ ಸಂಸ್ಥೆಯಿಂದ ಎಟಿಎಂ ಮಾದರಿಯಲ್ಲಿ ಹೊಸ ಇಡ್ಲಿ ವೆಂಡಿಂಗ್ ಮಶೀನ್ ಸ್ಥಾಪಿಸಲಾಗಿದೆ.
‘ಚರ್ಮ ಗಂಟು ರೋಗ’ದ ಬಗ್ಗೆ ರೈತರಿಗೊಂಡು ಮಹತ್ವದ ಮಾಹಿತಿ: ಈ ‘ಮನೆಮದ್ದು ಚಿಕಿತ್ಸೆ’ ಮಾಡಿ | Lumpy Skin Disease
ಬಿಸಿ ಬಿಸಿ ಇಡ್ಲಿ, ಸಾಂಬಾರ್ ಸವಿಯ ಬೇಕೆನ್ನುವಂತ ಆಹಾರ ಪ್ರಿಯರು, ಇಲ್ಲಿಗೆ ತೆರಳಿ ಫ್ರೆಶ್ ಹಾಟ್ ಆಪ್ ಮೂಲಕ ಆರ್ಡರ್ ಮಾಡಿ. ಆ ಬಳಿಕ ಕ್ಯೂ ಆರ್ ಕೋಡ್ ಬರುತ್ತದೆ. ಇಡ್ಲಿ ವೆಂಡಿಂಗ್ ಮಶೀನ್ ನಲ್ಲಿರುವಂತ ಸ್ಟಾರ್ಟ್ ಬಟನ್ ಒತ್ತಿ, ನೀವು ಖರೀದಿಸಿರುವಂತ ಬಗ್ಗೆ ಕ್ಯೂ ಆರ್ ಕೋಡ್ ತೋರಿಸಿದರೇ ಸಾಕು, ನೀವು ಆರ್ಡರ್ ಮಾಡಿದಂತ ಇಡ್ಲಿ, ವಡೆ, ಸಾಂಬರ್ ಕೆಲ ನಿಮಿಷಗಳಲ್ಲಿ ಲಭ್ಯವಾಗಲಿದೆ.
‘ಮೀನು ಪ್ರಿಯ’ ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್: ಶೀಘ್ರವೇ ‘ಬಿಬಿಎಂಪಿ ವಾರ್ಡ್’ಗಳಲ್ಲಿ ‘ಮೀನು ಆಹಾರ ಮಳಿಗೆ’ ಪ್ರಾರಂಭ
ಈ ಬಗ್ಗೆ ಟ್ವಿಟ್ ಮಾಡಿರುವಂತ ಉದ್ಯಮಿ ಆನಂದ್ ಮಹಿಂದ್ರ ( Industrialist Anand Mahindra ) ಅವರು, ಅನೇಕರು ರೊಬೋಟಿಕ್ ಆಹಾರ ತಯಾರಿಕೆ / ಮಾರಾಟ ಯಂತ್ರಗಳನ್ನು ರಚಿಸಲು ಪ್ರಯತ್ನಿಸಿದ್ದಾರೆ. ಇದು ಎಫ್ಎಸ್ಎಸ್ಎಐ ಮಾನದಂಡಗಳನ್ನು ಪೂರೈಸುತ್ತದೆ ಮತ್ತು ಪದಾರ್ಥಗಳನ್ನು ಸಾಕಷ್ಟು ತಾಜಾಗೊಳಿಸಲಾಗುತ್ತದೆ ಎಂದು ಊಹಿಸಬಹುದೇ? ಬೆಂಗಳೂರಿನ ಜನರೇ, ರುಚಿ ಹೇಗಿದೆ? ಜಾಗತಿಕವಾಗಿ ವಿಮಾನ ನಿಲ್ದಾಣಗಳು / ಮಾಲ್ ಗಳಲ್ಲಿ ಈ ಪಾಪ್ ಅಪ್ ನೋಡಲು ನಾನು ಇಷ್ಟಪಡುತ್ತೇನೆ ಎಂದಿದ್ದಾರೆ.
So many have attempted to create robotic food prep/vending machines. Presume this meets FSSAI standards & the ingredients are refreshed adequately? How is the taste, Bengaluru folks? I’d love to see this pop up in airports/malls globally. Will be a major ‘cultural’ export! pic.twitter.com/C8SjR6HwPK
— anand mahindra (@anandmahindra) October 16, 2022