ಬೆಂಗಳೂರು: ಇಂದು ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಕಾರ್ಯಕ್ರಮವೊಂದರ ವೇದಿಕೆಯಲ್ಲಿಯೇ ಮಾತನಾಡುತ್ತಿದ್ದಂತ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಅವರಿಗೆ, ಸಖತ್ ಕ್ಲಾಸ್ ತಗೊಂಡಿದ್ದಾರೆ. ಈ ಮೂಲಕ ಸಿಎಂ ಬೊಮ್ಮಾಯಿ ( CM Bommai ) ಸಚಿವರ ಮೇಲೆಯೇ ಗರಂ ಆದಂತ ಪ್ರಸಂಗ ಕೂಡ ನಡೆಯಿತು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಒಳನಾಡು ಮೀನು ಉತ್ಪಾಕರ ಸಮಾವೇಶ ನಡೆಯಿತು. ಈ ಸಮಾವೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಬಿ.ಸಿ ನಾಗೇಶ್ ದೀಪ ಬೆಳಗಿಸಿದ ನಂತ್ರ, ಮೀನಿನ ಮರಿಗಳನ್ನು ನೀರಿಗೆ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ವೇದಿಕೆಯಲ್ಲಿದ್ದಂತ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಸಚಿವ ಬಿ.ಸಿ ನಾಗೇಶ್ ಅವರ ಪಕ್ಕದಲ್ಲಿ ವೇದಿಕೆಯಲ್ಲಿ ಕುಳಿತಿದ್ದಂತವರೊಂದಿಗೆ ಸಿಎಂ ಮಾತನಾಡುತ್ತಿದ್ದರೂ, ತಾವು ಜೋರಾಗಿಯೇ ಮಾತನಾಡುತ್ತಿದ್ದರು.
BIGG NEWS : ನಾಳೆ ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ `ಪವಿತ್ರ ತೀರ್ಥೋದ್ಭವ’ : ಭಕ್ತರಿಗೆ ಇಲ್ಲಿದೆ ಮುಖ್ಯ ಮಾಹಿತಿ
ಸಚಿವ ಬಿ.ಸಿ ನಾಗೇಶ್ ವೇದಿಕೆಯಲ್ಲಿ ಮಾತನಾಡುತ್ತಿದ್ದದ್ದರಿಂದ ಸಿಟ್ಟಾದಂತ ಸಿಎಂ ಬೊಮ್ಮಾಯಿ, ನಿಮಗೆ ಮಾತನಾಡಬೇಕೆಂದ್ರೇ ಹೊರ ಹೋಗಿ ಮಾತನಾಡು ಎಂಬುದಾಗಿ ಗರಂ ಆಗೇ ಹೇಳಿದರು. ಈ ಮೂಲಕ ಶಿಕ್ಷಣ ಸಚಿವರಿಗೆ ವೇದಿಕೆಯ ಮೇಲೆ ಶಿಸ್ತಿನ ಪಾಠವನ್ನು ಮಾಡಿದರು.