ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ( Karnataka Examination Authority – KEA ) ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸುಗಳ ಮೊದಲನೆ ವರ್ಷದ, 1ನೇ ಸೆಮಿಸ್ಟರ್ ಗಳ ಪ್ರವೇಶಕ್ಕೆ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ-2022ಕ್ಕೆ ಅರ್ಜಿ ಸಲ್ಲಿಸೋದಕ್ಕೆ ಆಹ್ವಾನಿಸಿದೆ. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದ್ದು, ಅಕ್ಟೋಬರ್ 24, 2022 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2022-23ನೇ ಸಾಲಿನ ಮೊದಲನೇ ವರ್ಷದ, 1ನೇ ಸೆಮಿಸ್ಟರ್ ಗಳ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕಾಗಿ ಆನ್ ಲೈನ್ ( Online ) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Rain In Karnataka : ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ವಿಭಾಗದ GATE ಅರ್ಹ ಅಭ್ಯರ್ಥಿಗಳು ಮಾತ್ರ ವಿಟಿಯು, ಬೆಳಗಾವಿ ಅಡಿಯಲ್ಲಿನ ವಿವಿಧ ಎಂ.ಟೆಕ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿದೆ.
ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಒಟ್ಟು ಕನಿಷ್ಟ ಶೇ.50 ಹಾಗೂ ಕರ್ನಾಟಕ ಎಸ್ಸಿ, ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳು ಕನಿಷ್ಠ ಶೇ.45 ಅಂಕಗಳನ್ನು ಪಡೆದಿರಬೇಕು. ಸಿಜಿಪಿಎ, ಎಸ್ ಜಿಪಿಎ ಗ್ರೇಡ್ ಗಳ ಮಾದರಿಯಲ್ಲಿ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆಯ ಅಂಕಗಳು, ಅಗತ್ಯವಿರುವ ಕನಿಷ್ಠ ಅರ್ಹತಾ ಅಂಕಗಳನ್ನು ಅಥವಾ ಅಧಕ್ಕಿಂತ ಹೆಚ್ಚು ಅಂಕಗಳನ್ನು ಗ್ರೇಡ್ ಗಳ ಅಂಕಗಳು ಸೂಚಿಸುತ್ತಿವು ಬಗ್ಗೆ ಖಾತರಿ ಪಡಿಸಿಕೊಳ್ಳಿ ಎಂದಿದೆ.
BIG NEWS : ತಮಿಳುನಾಡಿನಲ್ಲಿ 60ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ವಾಂತಿ-ಭೇದಿ, ಆಸ್ಪತ್ರೆಗೆ ದಾಖಲು
ಪಿಜಿ ಸಿಇಟಿ-2022ಕ್ಕೆ ( PG CET-2022) ಆನ್ ಲೈನ್ ಮೂಲಕ ನೊಂದಣಿ ಹಾಗೂ ಅರ್ಜಿ ಸಲ್ಲಿಸಲು ಪೋರ್ಟಲ್ ಅನ್ನು ದಿನಾಂಕ 15-10-2022ರಿಂದ ತೆರೆಯಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 24-10-2022ರ ಸಂಜೆ 4 ರೊಳಗಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡಿ, ಶುಲ್ಕ ಪಾವತಿಸಿ, 26-10-2022ರ ರಾತ್ರಿ 11.59ರ ವರೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಿದೆ.
ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಪ್ರತಿ ಕೋರ್ಸಿಗೆ ರೂ.650, ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1ಕ್ಕೆ ಸೇರಿದ ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ರೂ.500 ಆಗಿರುತ್ತದೆ.
BIG NEWS: ಇನ್ಮುಂದೆ ಬೆಂಗಳೂರಿನಲ್ಲಿ ರಾತ್ರಿ 1 ಗಂಟೆವರೆಗೂ ‘ಹೋಟೆಲ್’ಗಳು ಓಪನ್