ಭುವನೇಶ್ವರ: ಹದಿನೆಂಟು ಶಾಸಕರು ಸೇರಿ 25 ಮಂದಿ ಪ್ರಭಾವಿ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಗೆ ( Honey Trap ) ಕೆಡವಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಂತ ಯುವತಿ ಅರ್ಚನಾ ನಾಗ್ ಎಂಬಾಕೆಯನ್ನು ಒಡಿಶಾದ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಬಂಧಿತ ಯುವತಿ ಅರ್ಚನಾ ನಾಗ್ ಅನ್ನು ಒಂದು ವಾರ ಕಳೆದಿದ್ದರೂ ವಿಚಾರಣೆಗೆ ಒಳಪಡಿಸದೇ ಇರೋದು ಹಾಗೂ ಪ್ರಕರಣವನ್ನು ಗುಟ್ಟಾಗಿ ನಿರ್ವಹಿಸುತ್ತಿರೋದು ಅನೇಕ ಅನುಮಾನಗಳಿಗೂ ಕಾರಣವಾಗಿದೆ.
Rain In Karnataka : ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
ಅಂದಹಾಗೇ ಹನಿಟ್ರ್ಯಾಪ್ ಗೆ ಒಳಗಾದವರಲ್ಲಿ ಬಹುಪಾಲು ಶಾಸಕರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಶಾಸಕರಾಗಿದ್ದಾರೆ. ಆದ್ರೇ ನಾಗ್ ಮತ್ತು ಆಕೆಯ ಪತಿ ಜಗಬಂದು ಚಂದ್ ಅನೇಕ ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಇರುವ ಈ ಶಾಕರ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾರನ್ನು ಬಲೆಗೆ ಕೆಡವಲು ಹೂಡಿದ್ದ ಸಂಚು ವಿಫಲವಾಗುತ್ತಿದ್ದಂತೇ, ಈ ಅರ್ಚನಾ ನಾಗ್ ಹಾಗೂ ಆಕೆಯ ಪತಿಯ ಹನಿಟ್ರ್ಯಾಪ್ ಕೇಸ್ ಬೆಳಕಿಗೆ ಬಂದಿದೆ.
BIG NEWS : ತಮಿಳುನಾಡಿನಲ್ಲಿ 60ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ವಾಂತಿ-ಭೇದಿ, ಆಸ್ಪತ್ರೆಗೆ ದಾಖಲು