ಬೆಂಗಳೂರು: ರಾಜ್ಯಾಧ್ಯಂತ ಪ್ಲೋರೈಡ್ ಯುಕ್ತ ನೀರಿನಿಂದ ಉಂಟಾಗುತ್ತಿದ್ದಂತ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ, ಹಳ್ಳಿ ಹಳ್ಳಿಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರ್ಕಾರ ಸ್ಥಾಪಿಸಿದೆ. ಆದ್ರೇ ಹೀಗೆ ಸ್ಥಾಪಿಸಿದಂತ ಶುದ್ಧ ಕುಡಿಯುವ ನೀರಿನ ಘಟಕಗಳು ಶೇ.79ರಷ್ಟು ಶುದ್ಧ ನೀರಿನ ಪೂರೈಕೆ ಹೊಂದಿಲ್ಲ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ.
Rain In Karnataka : ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
ಈ ಸಂಬಂಧ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ವಿಧಾನ ಮಂಡಲದ ಜಂಟಿ ಸದನ ಸಮತಿಗೆ ವರದಿಯನ್ನು ಸಲ್ಲಿಸಿದ್ದು, ರಾಜ್ಯಾಧ್ಯಂತ 2013-14 ರಿಂದ 2020-21ರ ವರೆಗೆ 25,219 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ 19,977 ಘಟಕಗಳ ನೀರಿನ ಮೂಲ ಕಲುಷಿತಗೊಂಡಿದೆ ಎಂಬ ಕಳವಳಕಾರಿ ಸಂಗತಿಯನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
BIG NEWS : ತಮಿಳುನಾಡಿನಲ್ಲಿ 60ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ವಾಂತಿ-ಭೇದಿ, ಆಸ್ಪತ್ರೆಗೆ ದಾಖಲು
ಇನ್ನೂ 25,219 ಆರ್ ಓ ಘಟಕಗಳ ಪೈಕಿ 569 ಘಟಕಗಳು ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿವೆ. ಈಗ 24,650 ಘಟಕಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. 21,424 ಘಟಕಗಳಿಗೆ ಬಿಐಎಸ್, ಐಎಸ್ಓ ಪ್ರಮಾಣೀಕೃತ ಉಪಕರಣಗಳನ್ನು ಅಳವಡಿಸಲಾಗಿದೆ. 973 ಘಟಕಗಳಿಗೆ ಬಿಐಎಸ್, ಐಎಸ್ಓ ಪ್ರಮಾಣೀಕೃತ ಘಟಕಗಳನ್ನು ಅಳವಡಿಸಿಲ್ಲ. 2,809 ಘಟಕಗಳ ನಿರ್ವಹಣೆಗೆ ಯಾವುದೇ ಒಪ್ಪಂದ ಆಗಿಲ್ಲ. ಈ ಹಿನ್ನಲೆಯಲ್ಲಿ ಘಟಕಗಳು ನಿರ್ವಹಣೆ ಇಲ್ಲದೇ ಸೊರಗುತ್ತಿರೋದು ತಿಳಿದು ಬದಿದೆ.
BIG NEWS: ಇನ್ಮುಂದೆ ಬೆಂಗಳೂರಿನಲ್ಲಿ ರಾತ್ರಿ 1 ಗಂಟೆವರೆಗೂ ‘ಹೋಟೆಲ್’ಗಳು ಓಪನ್