ಚಿಕ್ಕಬಳ್ಳಾಪುರ : ರಾತ್ರೋ ರಾತ್ರಿ ಸುರಿದ ಭಾರೀ ಮಳೆಗೆ ಹಲವೆಡೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ಭಾಗದಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಅಪಾಯದ ಮಟ್ಟ ಮೀರಿ ಕೋಡಿ ಹರಿಯುತ್ತಿದೆ.
BREAKING NEWS: ಛತ್ತೀಸ್ಗಢದ ಅಂಬಿಕಾಪುರದಲ್ಲಿ ಭೂಕಂಪ: 4.8 ತೀವ್ರತೆ ದಾಖಲು | earthquake in Chhattisgarh
ಗುಡಿಬಂಡೆ-ಪೇರೇಸಂದ್ರ ಮಾರ್ಗ, ಗುಡಿಬಂಡೆ ಹಂಪಸಂದ್ರ-ಬಾಗೇಪಲ್ಲಿ ಮಾರ್ಗ, ಗುಡಿಬಂಡೆ-ಲಕ್ಕೇನಹಳ್ಳಿ ಮಾರ್ಗ, ರಾಮಪಟ್ಟಣ ನವಿಲುಗುರ್ಕಿ ಮಾರ್ಗ, ಗುಡಿಬಂಡೆ ಅಮಾನಿ ಭೈರಸಾಗರ ಮಾರ್ಗಗಳಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಜಲದಿಗ್ಬಂಧನವಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಮಾರ್ಗಗಳಲ್ಲೂ ಸಂಚಾರ ಕಷ್ಟಕರವಾಗಿದೆ
BREAKING NEWS: ಛತ್ತೀಸ್ಗಢದ ಅಂಬಿಕಾಪುರದಲ್ಲಿ ಭೂಕಂಪ: 4.8 ತೀವ್ರತೆ ದಾಖಲು | earthquake in Chhattisgarh
ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರಕ್ಕೆ ಬರಲು ಗೌರಿಬಿದನೂರು ಮಾರ್ಗ ಬಳಸಬೇಕಿದೆ. ಬಾಗೇಪಲ್ಲಿಯಲ್ಲೂ ಭರ್ಜರಿ ಮಳೆಯಾಗಿರುವುದರಿಂದ ಪಟ್ಟಣದ ಟಿಬಿ ಕ್ರಾಸ್ ಬಳಿ ಅಂಡರ್ ಪಾಸ್ ಜಲಾವೃತವಾಗಿ ವಾಹನ (Vehicle) ಸವಾರರು ಪರದಾಡುತ್ತಿದ್ದಾರೆ.
BREAKING NEWS: ಛತ್ತೀಸ್ಗಢದ ಅಂಬಿಕಾಪುರದಲ್ಲಿ ಭೂಕಂಪ: 4.8 ತೀವ್ರತೆ ದಾಖಲು | earthquake in Chhattisgarh
ಇದರಿಂದ ಬಾಗೇಪಲ್ಲಿಗೆ ತೆರಳಲು ಎಲ್ಲೋಡು ಮಾರ್ಗ ಕಲ್ಪಿಸಲಾಗಿದೆ. ಕಾರೊಂದು ಜಲಾವೃತವಾಗಿ ಅಂಡರ್ ಪಾಸ್ನಲ್ಲೇ ಕೆಟ್ಟುನಿಂತಿದೆ. ಬಾಗೇಪಲ್ಲಿ-ಪುಟ್ಟಪರ್ತಿ ಮಾರ್ಗದಲ್ಲಿ ಕುಶಾವತಿ ಮೈದುಂಬಿ ಹರಿಯುತ್ತಿದ್ದು, ಪುಟ್ಟಪರ್ತಿ ಮಾರ್ಗದ ಸಂಚಾರ ಬಂದ್ ಆಗಿದೆ. ಗುಡಿಬಂಡೆ ತಾಲ್ಲೂಕು ನಿಲಗುಂಬ ಗ್ರಾಮ ಸೇರಿ ಹಲವೆಡೆ ಮನೆಗಳು ಕುಸಿದಿರುವ ಮಾಹಿತಿಯಿದೆ.
BREAKING NEWS: ಛತ್ತೀಸ್ಗಢದ ಅಂಬಿಕಾಪುರದಲ್ಲಿ ಭೂಕಂಪ: 4.8 ತೀವ್ರತೆ ದಾಖಲು | earthquake in Chhattisgarh