ಶಿವಮೊಗ್ಗ: ಇಂದು ಮಧ್ಯಾಹ್ನ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಭೂಕಂಪನದ ( Earthquake ) ಅನುಭವ ಉಂಟಾಗಿದೆ ಎನ್ನಲಾಗಿತ್ತು. ಆದ್ರೇ ಭೂ ಕಂಪನ ಸಂಭವಿಸಿಲ್ಲ ಎಂಬುದಾಗಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ( Karnataka State Natural Disaster Monitoring Centre – KSNDMC ) ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಕೆ ಎಸ್ ಎನ್ ಡಿ ಎಂ ಸಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಶಿವಮೊಗ್ಗದ ಲಿಂಗನಮಕ್ಕಿ ಅಣೆಕಟ್ಟು, ಹಾಸನ ಜಿಲ್ಲೆಯ ಹೇಮಾಪತಿ ಅಣೆಕಟ್ಟು, ಉತ್ತರ ಕನ್ನಡ ಜಿಲ್ಲೆಯ ಸೂಪಾ ಅಣೆಕಟ್ಟು, ಮೈಸೂರು ಜಿಲ್ಲೆಯ ಕೆ ಆರ್ ಎಸ್ ಅಣೆಕಟ್ಟು ಮತ್ತು ಉಡುಪಿ ಜಿಲ್ಲೆಯಲ್ಲಿ ಶಾಶ್ವತ ಭೂಕಂಪನ ಮಾಪನ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದಿದ್ದಾರೆ.
ಸೀಮಿತ ಬಳಕೆದಾರರಿಗೆ ಜಿಯೋ 5G Welcome ಆಫರ್ ಘೋಷಣೆ ; ಸೇವೆ ಪಡೆಯುವುದು ಹೇಗೆ ಗೊತ್ತಾ??
ಇಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಭೂಕಂಪನ ಸಂಭವಿಸಿದಂತ ಅನುಭವ ಆಗಿರೋ ಬಗ್ಗೆ ಜನರು ಮಾಹಿತಿ ನೀಡಿದ್ದರು. ಆದ್ರೇ ರಾಜ್ಯದ ವಿವಿಧೆಡೆ ಸ್ಥಾಪಿಸಿರುವಂತ ಭೂಕಂಪನ ಶಾಶ್ವತ ಕೇಂದ್ರದ ದತ್ತಾಂಶವನ್ನು ಪರಿಶೀಲಿಸಿದಾಗ, ಯಾವುದೇ ರೀತಿಯ ಭೂಕಂಪನ ಮಾಹಿತಿ ದಾಖಲಾಗಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.