ಬೆಂಗಳೂರು: ಬಿಬಿಎಂಪಿಯ ಮುಖ್ಯ ಆಯುಕ್ತರ ( BBMP Chief Commissioner ) ಪೋಟೋವನ್ನು ಡಿಪಿಗೆ ಹಾಕಿಕೊಂಡು, ಸಂದೇಶ ಕಳುಹಿಸಿದಂತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಮೂಲಕ ಅನುಮತಿಯಿಲ್ಲದೇ ಬಿಬಿಎಂಪಿ ಆಯುಕ್ತರ ಪೋಟೋ ಡಿಪಿಗೆ ಹಾಕಿಕೊಂಡವರಿಗೆ ಬಿಗ್ ಶಾಕ್ ನೀಡಲಾಗಿದೆ.
ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ( BBMP Chief Commissioner Tushar Girinath ) ಅವರು ಮಾಹಿತಿ ನೀಡಿದ್ದು, ದಿನಾಂಕ 02-10-2022ರಂದು ಮೊಬೈಲ್ ಸಂಖ್ಯೆ 8076618135ನಿಂದ ನನ್ನ ಭಾವಚಿತ್ರವನ್ನು ಹಾಕಿಕೊಂಡು, ನನ್ನ ಸಹೋದ್ಯೋಗಿಗೆ ಸಂದೇಶವನ್ನು ಕಳುಹಿಸಿರುತ್ತಾರೆ ಎಂದಿದ್ದಾರೆ.
ನನ್ನ ಅನುಮತಿಯಿಲ್ಲದೇ ಈ ರೀತಿ ನನ್ನ ಪೋಟೋ ಹಾಕಿಕೊಂಡು ನನಗೆ ಸಂಬಂಧವಿಲ್ಲದ ಮೊಬೈಲ್ ಸಂಖ್ಯೆಯಿಂದ ತಪ್ಪಾಗಿ ಸಂದೇಶ ರವಾನಿಸುತ್ತಿರುವ ಅಪರಿಚಿತರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಸೈಬರ್ ಕ್ರೈಂ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.