ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ರಕ್ತ ಬೀಜಾಸುರ, ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಪ್ರಹ್ಲಾದ್ ಜೋಶಿ (Prahlad Joshi) ವಾಗ್ಧಾಳಿ ನಡೆಸಿದ್ದಾರೆ.
ಹಗರಣ ಇಲ್ಲದೆ ಕಾಂಗ್ರೆಸ್ ಸರ್ಕಾರ ನಡೆದಿಲ್ಲ, ಹಗರಣಗಳಿಂದಲೇ ಇಂದು ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ ಎಂದು ಜೋಶಿ ಹೇಳಿದ್ದಾರೆ. ಕರ್ನಾಟಕದಲ್ಲಿ ರಾಜ್ಯದಲ್ಲಿ ಹವಾ ಕ್ರಿಯೇಟ್ ಮಾಡಲು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ (Bharat jodo yatra) ಮಾಡುತ್ತಿದೆ ಎಂದರು.
ರಾಹುಲ್ ಗಾಂಧಿಗೆ ಸರಿಯಾದ ಭಾಷಣ ಬರೆದುಕೊಡಿ. ಜನ ರಾಹುಲ್ ಗಾಂಧಿಯನ್ನು ಮೊದಲೇ ಸೀರಿಯಸ್ ಆಗಿ ತಗೊಳೋದಿಲ್ಲ. ಅವರು ಇನ್ನಷ್ಟು ನಗೆಪಾಟಲೀಗಿಡಾಗೋದು ಬೇಡಾ ಎಂದು ಜೋಷಿ ಹೇಳಿದ್ದಾರೆ. ಹಗರಣ ಇಲ್ಲದೆ ಕಾಂಗ್ರೆಸ್ ಸರ್ಕಾರವೇ ನಡೀತಿಲ್ಲ. ಹಗರಣದಿಂದಲೇ ಕಾಂಗ್ರೆಸ್ ಸರ್ಕಾರ ಕಳೆದುಕೊಂಡರು. . ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್ ಗಿಲ್ಲ ಎಂದರು.
ಕಾಂಗ್ರೆಸ್ ಕಾರಣದಿಂದ ಕಲ್ಲಿದ್ದಲ್ಲು ಹಗರಣದಲ್ಲಿ ಅಧಿಕಾರಿಗಳ ಮೇಲೆ ತನಿಖೆ ನಡೆಯತ್ತಿದೆ. ಭ್ರಷ್ಟಾಚಾರದ ಬಗ್ಗೆ ಇವರು ಮಾತಾಡೋದು ನೋಡಿದರೆ ನನಗೆ ಆಶ್ಚರ್ಯ ಆಗುತ್ತಿದೆ.
ಸುವರ್ಣಸೌಧದಲ್ಲಿ ಈ ವರ್ಷ ಚೆನ್ನಮ್ಮ, ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ – ಸಿಎಂ ಬೊಮ್ಮಾಯಿ ಘೋಷಣೆ