ಹಾವೇರಿ : ಅಕ್ಟೋಬರ್ ತಿಂಗಳಿನ ಮೊದಲ ವಾರದಲ್ಲಿ ಗಾಂಧಿ ಜಯಂತಿ ಮತ್ತು ನವರಾತ್ರಿ/ ದಸರಾ ಹಬ್ಬದ ಅಂಗವಾಗಿ ಸಾರ್ವಜನಿಕರು ಹಬ್ಬ ಆಚರಿಸಲು ತಮ್ಮ ಸ್ವಂತ ಊರುಗಳಿಗೆ ತೆರಳುವದರಿಂದ ವಾ.ಕ.ರ.ಸಾ.ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಅಂದಾಜು 500 ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ದಿನಾಂಕ 02-10-22 ಭಾನುವಾರ, ದಿ. 04-10-22 ಮಂಗಳವಾರ ಮತ್ತು ದಿ.05-10-22 ಬುಧವಾರ ರಂದು ಕ್ರಮವಾಗಿ ಗಾಂಧಿ ಜಯಂತಿ, ಮಹಾನವಮಿ/ಆಯುಧ ಪೂಜೆ, ವಿಜಯದಶಮಿ ಇರುವದರಿಂದ ಬೆಂಗಳೂರು, ಮಂಗಳೂರು, ಹೈದ್ರಾಬಾದ್, ಪಣಜಿ, ಮುಂಬಯಿ, ಪುಣೆ ಹಾಗೂ ರಾಜ್ಯ, ಅಂತರರಾಜ್ಯದ ವಿವಿಧ ಭಾಗಗಳಿಂದ ಪ್ರಯಾಣಿಕರು ಹಬ್ಬಕ್ಕಾಗಿ ತಮ್ಮ ಸ್ವಂತ ಊರುಗಳಿಗೆ ತೆರಳಲು ದಿನಾಂಕ 30-09-22 ರಿಂದ 03-10-22 ರ ವರೆಗೆ ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.
BREAKING: ಗಂಟುರೋಗದಿಂದ ಮೃತಪಟ್ಟ ದನಗಳಿಗೆ 20 ಸಾವಿರ ರೂ ಪರಿಹಾರ – ಸಿಎಂ ಬೊಮ್ಮಾಯಿ ಘೋಷಣೆ | Lumpy Skin Disease
ಹಬ್ಬ ಮುಗಿದ ನಂತರ ತಮ್ಮ ಸ್ವಂತ ಊರುಗಳಿಂದ ಬೆಂಗಳೂರು, ಮಂಗಳೂರು, ಹೈದ್ರಾಬಾದ್, ಪಣಜಿ, ಮುಂಬಯಿ, ಪುಣೆ ಹಾಗೂ ರಾಜ್ಯದ/ಅಂತರರಾಜ್ಯದ ಇನ್ನಿತರ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ದಿನಾಂಕ 05-10-22 ರಿಂದ ದಿ 09-10-22 ರ ವರೆಗೆ ಸಂಸ್ಥೆಯ ಪ್ರಮುಖ ಬಸ್ ನಿಲ್ದಾಣಗಳಿಂದ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಕುರಿತು ಪ್ರಯಾಣಿಕರು ಮುಂಗಡ ಟಿಕೇಟ್ಗಳನ್ನು Ksrtc Mobile App ಅಥವಾ www.ksrtc.in ವೆಬ್ಸೈಟ್ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.
ಈ ವಿಶೇಷ ಸಾರಿಗೆಗಳ ಸದುಪಯೋಗ ಪಡಿಸಿಕೊಳ್ಳುವದರೊಂದಿಗೆ, ಸುಖಕರ ಹಾಗೂ ಸುರಕ್ಷಿತ ಪ್ರಯಾಣಿಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವಂತೆ ಮತ್ತು ವಿಶೇಷ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
BREAKING NEWS: ರಾಜ್ಯದ ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ‘7 ಗಂಟೆ ವಿದ್ಯುತ್’ ಸರಬರಾಜು – ಸಿಎಂ ಬೊಮ್ಮಾಯಿ ಆದೇಶ